ಮರಕಡ ಶಾಲೆಯಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ ಉದ್ಘಾಟನೆ

marakada
Published on

ಗುರುಪುರ: ಕುಂಜತ್ತಬೈಲು ವಾರ್ಡ್‌ನ ಮರಕಡದ ದಕ ಜಿಪಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಆಂಗ್ಲ ಮಾಧ್ಯಮದ 1ನೇ ತರಗತಿಯನ್ನು ಶಾಸಕ ಡಾ. ಭರತ್ ಶೆಟ್ಟಿ ಅವರು ಶನಿವಾರ ಉದ್ಘಾಟಿಸಿದರು.

ಸರ್ಕಾರಿ ಸೇವೆಯಿಂದ ನಿವೃತ್ತರಾದ ಶಾಲಾ ಶಿಕ್ಷಕಿ ಜುಡಿತ್ ವೇಗಸ್ ಅವರಿಗೆ ಆಯೋಜಿಸಲಾದ ಬೀಳ್ಕೊಡುಗೆ, ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕಿಗೆ, ಶಾಸಕರು ಶುಭ ಹಾರೈಸಿದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಾಗೂ ಮನಪಾ ಕಾರ್ಪೊರೇಟರ್ ಶರತ್ ಕುಮಾರ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನಾರಾಯಣ ಸಾಲ್ಯಾನ್, ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ರೋಸ್ಲಿನ್, ಮುಲ್ಲಕಾಡು ಶಾಲಾ ಮುಖ್ಯಶಿಕ್ಷಕ ಉಸ್ಮಾನ್, ಡಾ. ಡೊನಾಲ್ಡ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ನೇತ್ರಾವತಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನೊ ಪ್ರಸ್ತಾವಿಸಿದರು. ಶಾಲಾ ಶಿಕ್ಷಕಿಯರಾದ ಮರೀನಾ ನಿರೂಪಿಸಿದರೆ, ಶೋಭಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net