ಸೋಮಸುಂದರ್ ಅಂಚನ್‌ಗೆ ನುಡಿನಮನ

nudinamana
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಸೋಮಸುಂದರ ಅವರು ಸರಳ ಸಜ್ಜನಿಕೆಯ, ನೇರ ನಡೆನುಡಿಯ ವ್ಯಕ್ತಿಯಾಗಿ ಧಾರ್ಮಿಕ ಕ್ಷೇತ್ರ ದ ಮುಖಂಡರಾಗಿ ನೀಡಿದ ಸೇವೆ ಮಾದರಿ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ಹೇಳಿದರು.

ಇತ್ತೀಚೆಗೆ ನಿಧನರಾದ ನಡಿಕುದ್ರು ಗ್ರಾಮದ ಒಂದನೇ ಗುರಿಕಾರ ದಿ.ಸೋಮಸುಂದರ್ ಅಂಚನ್ ಅವರಿಗೆ ಸಾರ್ವಜನಿಕ ನುಡಿನಮನ ಸಭೆಯಲ್ಲಿ ಮಾತನಾಡಿದರು.

ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಮಾತನಾಡಿ, ಸೋಮಸುಂದರ ಅವರು ವೃತ್ತಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರೂ ಧಾರ್ಮಿಕ ಸೇವೆಯ ಬಗ್ಗೆ ಹೆಚ್ಚಿನ ಒಲುವು ಇದ್ದವರು. ಶುದ್ಧ ನಡೆ ನುಡಿ ಹಾಗೂ ಆಚಾರ ವಿಚಾರಗಳಲ್ಲಿ ಪ್ರಾಮಾಣಿಕತೆ ಹೊಂದಿರುವ ಅವರು ಎಲ್ಲರಿಗೂ ಆತ್ಮೀಯರಾಗಿದ್ದರು ಎಂದರು.

ಪ್ರಕಾಶ್ ಶೆಟ್ಟಿ ಪಡುಹಿತ್ಲು, ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಬಾಲಚಂದ್ರ ಸನಿಲ್, ರಂಗಕರ್ಮಿ ಗಿರೀಶ್ ಫಲಿಮಾರ್, ವಾಸು ಪೂಜಾರಿ ಚಿತ್ರಾಪು, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎನ್.ಕೋಟ್ಯಾನ್, ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ಗುರಿಕಾರ ವಾಮನ್ ಕೋಟ್ಯಾನ್ ನಡಿಕುದ್ರು ಮತ್ತಿತರರು ಮಾತನಾಡಿದರು. ಮೌನ ಪ್ರಾರ್ಥನೆ ಹಾಗೂ ದಿ.ಸೋಮಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ನಿತ್ಯ ಅರ್ಚಕ ನಿರಂಜನ್ ಪೂಜಾರಿ ನಡಿಕುದ್ರು, ಉದ್ಯಮಿ ಅವಿನಾಶ್ ಕೋಟ್ಯಾನ್, ರಮೇಶ್ ಅಮೀನ್ ಕೊಕ್ಕರಕಲ್, ಪುರುಷೋತ್ತಮ ರಾವ್ ಬಡಗುಹಿತ್ಲು, ಉಮೇಶ್ ನಡಿಕುದ್ರು, ರಾಮನಾಥ್ ಸುವರ್ಣ ಕೊಳಚಿಕಂಬಳ ಹಾಗೂ ದಿ.ಸೋಮ ಸುಂದರ್‌ರವರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಘಟಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ par ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net