ಕಸದ ಸಮಸ್ಯೆ ನಿವಾರಣೆಗೆ ಅಧ್ಯಯನ : ಸಂತೋಷ್ ರೈ ಅಭಿಪ್ರಾಯ

New Project (8)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸ್ವಾತಂತ್ರೃ ಪೂರ್ವದಲ್ಲೇ ಗಾಂಧೀಜಿ ಸ್ವಚ್ಛ ಭಾರತ ಕನಸು ಕಂಡರೆ, ಈಗಿನ ಪ್ರಧಾನಿ ಸ್ವಚ್ಛ ಭಾರತ ಶ್ರೇಷ್ಠ ಭಾರತ ಅಭಿಯಾನ ಆರಂಭಿಸಿದ್ದಾರೆ. ಕಸದ ಸಮಸ್ಯೆ ಹಿಂದಿನಿಂದಲೂ ಇದ್ದು ಸಮಸ್ಯೆ ನಿವಾರಣೆಗೆ ಅಧ್ಯಯನ ನಡೆಯಬೇಕಿದೆ ಎಂದು ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುವಾರ್ ರೈ ಬೋಳಿಯಾರ್ ಹೇಳಿದರು.

ಮಂಗಳೂರು ದಕ್ಷಿಣ ವಲಯ ಶಾಲಾ ಶಿಕ್ಷಣ ಇಲಾಖೆ, ಬೋಳಿಯಾರ್, ಹರೇಕಳ ಹಾಗೂ ಪಾವೂರು ಗ್ರಾಪಂ ಸಹಕಾರದಲ್ಲಿ ಹಸಿರುದಳ ಆಶ್ರಯದಲ್ಲಿ ಮೂರು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಸ ನಿರ್ವಹಣೆ ಮತ್ತು ಜಾಗೃತಿ, ಶೂನ್ಯ ತ್ಯಾಜ್ಯ ಮಾದರಿ ಶಾಲೆ ಮತ್ತು ಪಂಚಾಯಿತಿ ನಿರ್ಮಾಣ ನಿಟ್ಟಿನಲ್ಲಿ ಗುರುವಾರ ಬೋಳಿಯಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿ ಅಂತರ್ ಶಾಲಾ ಸ್ಪರ್ಧೆ ‘ಕಸಾಯಣ’ ವಿದ್ಯಾರ್ಥಿಗಳ ಪ್ರತಿಭಾ ಸಮ್ಮಿಲನ ಉದ್ಘಾಟಿಸಿ ಮಾತನಾಡಿದರು.

ಪಾವೂರು ಪಿಡಿಒ ಕೃಷ್ಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಸಿರುದಳ ವ್ಯವಸ್ಥಾಪಕ ನಾಗರಾಜ್, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ದೊಂಬಯ್ಯ ಇಡ್ಕಿದು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಖೈರುನ್ನಿಸಾ, ಬೋಳಿಯಾರ್ ಶಾಲೆ ಮುಖ್ಯಶಿಕ್ಷಕಿ ಚಂದ್ರಕಲಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಬೋಳಿಯಾರ್ ಗ್ರಾ.ಪಂ.ಕಾರ್ಯದರ್ಶಿ ದಿನೇಶ್ ಕುವಾರ್, ಹಸಿರುದಳದ ದ್ರುವ್ ತಿಮ್ಮಯ್ಯ ಮುಖ್ಯ ಅತಿಥಿಗಳಾಗಿದ್ದರು. ಹಸಿರುದಳದ ರೇಖಾ ಸ್ವಾಗತಿಸಿದರು. ವ್ಯವಸ್ಥಾಪಕ ನಾಗರಾಜ್ ಪ್ರಸ್ತಾವಿಸಿದರು. ಪ್ರಜ್ವಲ್ ನಿರೂಪಿಸಿದರು. ಧನುಷ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net