ಕೊಕ್ಕರ್ಣೆ: ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಸ್.ಎಂ.ಎಸ್.ಪದವಿ ಪೂರ್ವ ಕಾಲೇಜು ಬ್ರಹ್ಮಾವರ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ಕೊಕ್ಕರ್ಣೆ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಐವಾನ್ ದೊನಾತ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಒ.ಎಸ್.ಸಿ.ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಂ.ಸಿ.ಮಥಾಯಿ ಉದ್ಘಾಟಿಸಿದರು. ಮಂಗಳೂರು ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ವಿಭಾಗೀಯ ಅಧಿಕಾರಿ ಸವಿತಾ ಎರ್ಮಾಳ್, ಅನಿತಾ ವಿದ್ಯಾ ಸಂಸ್ಥೆ ಕೊಕ್ಕರ್ಣೆ ಖಜಾಂಚಿ ಜಯರಾಂ ಶೆಟ್ಟಿ, ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆ ಕೊಕ್ಕರ್ಣೆ ಪ್ರಾಂಶುಪಾಲ ಸುರೇಶ್ ಕುಮಾರ್ ಶೆಟ್ಟಿ, ಕೊಕ್ಕರ್ಣೆ ದುರ್ಗಾ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಚಂದ್ರಶೇಖರ್ ನಾಯಕ್, ಓ.ಎಸ್.ಸಿ. ಎಜುಕೇಶನಲ್ ಸೊಸೈಟಿ ಬ್ರಹ್ಮಾವರ ಪಿಯು ವಿಭಾಗದ ಕೋಶಾಧಿಕಾರಿ ಥೋಮಸ್ ಸುವಾರಿಸ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದ ಕಾರ್ಯಕ್ರಮಧಾರಿ ಪ್ರಸನ್ನ ಅಡಿಗ ಸ್ವಾಗತಿಸಿ, ಶಿಬಿರದ ಉದ್ದೇಶ ತಿಳಿಸಿದರು. ಶಿಬಿರದ ಸ್ವಯಂಸೇವಕರ ನಾಯಕಿ ಸ್ವಾತಿ ಹಾಗೂ ನಾಯಕ ಸುಹಾನ್ ಉಪಸ್ಥಿತರಿದ್ದರು. ರಾಘವೇಂದ್ರ ಐತಾಳ್, ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು.