ಕೋಟ: ಅಂಗಾಂಗ ದಾನದ ಕ್ರಿಯೆಯಲ್ಲಿ ಕುಟುಂಬದವರ ಸಹಕಾರ ಪ್ರೋತ್ಸಾಹ ಬಹಳ ಅಗತ್ಯ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಹೇಳಿದರು.

ಸ್ನೇಹಕೂಟ ಮಣೂರು ಅಕ್ಟೋಬರ್ ತಿಂಗಳ ಕಾರ್ಯಕ್ರಮ ಮಣೂರು ದೇವಸ್ಥಾನದ ಆಡಳಿತ ಮಂಡಳಿ ಸಹಯೋಗದೊಂದಿಗೆ ಮಣೂರು ದೇವಸ್ಥಾನದ ವಠಾರದಲ್ಲಿ ಅಂಗಾಂಗ ದಾನದ ಮಹತ್ವ ಅರಿವು ಕಾರ್ಯಕ್ರಮ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಸ್ನೇಹಕೂಟದ ಸದಸ್ಯೆಯೊಬ್ಬರ ಪತಿಯ ಅನಾರೋಗ್ಯ ನಿಮಿತ್ತ ಆಸ್ಪತ್ರೆ ವೆಚ್ಚಕ್ಕಾಗಿ ಅವರಿಗೆ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೋಟದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಮಾಹಿತಿ ನೀಡಿದರು. ಸಂಚಾಲಕಿ ಭಾರತಿ ಮಯ್ಯ ಉಪಸ್ಥಿತರಿದ್ದರು. ಸದಸ್ಯೆ ಸುಜಾತಾ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಸ್ಮಿತಾರಾಣಿ ವಂದಿಸಿದರು. ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ಜರಗಿತು.