ಕಲೆ ಆಸಕ್ತಿ ಮೂಡಿಸುವಲ್ಲಿ ಯಕ್ಷಗಾನ ಸಹಕಾರಿ

kale
ಕರ್ಜೆ ಮೈರ್ಮಾಡಿ ಶ್ರೀ ಮಹಾಮ್ಮಾಯಿ ಹತ್ತರಕಟ್ಟೆ ಸಂಕದಮನೆಯಲ್ಲಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.
Published on

ಕೊಕ್ಕರ್ಣೆ: ಟ್ರಸ್ಟ್ ಪ್ರತಿ ವರ್ಷ ಯಕ್ಷೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದರಿಂದ ಸ್ಥಳೀಯರಿಗೆ ಯಕ್ಷಗಾನ ಕಲೆಯ ಆಸಕ್ತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಯಕ್ಷಗಾನ ಕಲಾವಿದ ಸುರೇಶ್ ರಾವ್ ಬಾರಕೂರು ಹೇಳಿದರು.

ಕರ್ಜೆ ಮೈರ್ಮಾಡಿ ಶ್ರೀ ಮಹಾಮ್ಮಾಯಿ ಹತ್ತರಕಟ್ಟೆ ಸಂಕದಮನೆಯಲ್ಲಿ ಚೇರ್ಕಾಡಿಯ ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ಜೆ ಆಯುಷ್ ವೈಧ್ಯಾಧಿಕಾರಿ ಡಾ.ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ಜೆ ಗ್ರಾಪಂ ಅಧ್ಯಕ್ಷ ಇನಕರ ಶೆಟ್ಟಿ, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ತಾಪಂ ಮಾಜಿ ಸದಸ್ಯೆ ಗೋಪಿ ಕೆ.ನಾಯ್ಕ, ಸದಸ್ಯೆ ಸುಗುಣಾ, ಗುರಿಕಾರ ಪಾಂಡು ನಾಯ್ಕ ಉಪಸ್ಥಿತರಿದ್ದರು. ನಾಲ್ಕು ಮಂದಿ ಕಲಾವಿದರನ್ನು ಸನ್ಮಾನಿಸಲಾಯಿತು. ಸ್ವಾತಿ ಚೇರ್ಕಾಡಿ ಸ್ವಾಗತಿಸಿದರು. ಅಕ್ಷತಾ ಮಾರ್ಪಳ್ಳಿ ನಿರೂಪಿಸಿದರು. ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅರುಣ ಕುಮಾರ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net