ಪಡುಬಿದ್ರಿ: ಅದಾನಿ ಸಂಸ್ಥೆ ಸಿಎಸ್‌ಆರ್ ಯೋಜನೆಯಡಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ನೆರೆ ಗ್ರಾಮಗಳಲ್ಲಿ 13 ಕೋಟಿ ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.
ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಅದಾನಿ ಸಿಎಸ್‌ಆರ್ ಅನುದಾನದಲ್ಲಿ ಕೈಗೊಂಡ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. 16 ಲಕ್ಷ ರೂ. ವೆಚ್ಚದಲ್ಲಿ ಬೆಳಪು ಗ್ರಾಮದ ಶ್ರೀ ಧರ್ಮಜಾರಂದಾಯ ದೈವಸ್ಥಾನ ಬಳಿಯ ಜಾರಂದಾಯ ಕೆರೆ ಅಭಿವೃದ್ಧಿ, ಪಣಿಯೂರು ಗ್ರಾಮದಲ್ಲಿ ನಾಲೆಗೆ ತಡೆಗೋಡೆ ಹಾಗೂ ಕೊರಗ ಸಮುದಾಯದ ಶ್ರೀ ಬ್ರಹ್ಮಗುಡಿಯ ಆವರಣಗೋಡೆ ಕಾಮಗಾರಿಗಳನ್ನು ಕಿಶೋರ್ ಆಳ್ವ ಮತ್ತು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.
ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ತಾಪಂ ಮಾಜಿ ಸದಸ್ಯ ಶೇಖಬ್ಬ, ಗ್ರಾಪಂ ಸದಸ್ಯರಾದ ಶರತ್‌ಕುಮಾರ್, ಪ್ರಕಾಶ್ ಭಟ್, ಅನಿತಾ, ಸೌಮ್ಯಾ, ಉಷಾ, ಸುಲೈಮಾನ್ ಗ್ರಾಮದ ಪ್ರಮುಖರಾದ ನಾರಾಯಣ ಪೂಜಾರಿ, ಕೃಷ್ಣ ಶೆಟ್ಟಿ, ಲೋಕೆಶ್ ಶೆಟ್ಟಿ, ಗಣೇಶ ಶೆಟ್ಟಿ, ಯೋಗೇಶ್ ಪೂಜಾರಿ, ಉಮೇಶ ಪೂಜಾರಿ, ಸುಭಾಷ್ ಶೆಟ್ಟಿ, ಪ್ರಕಾಶ್‌ಅಂಚನ್, ರಮಾನಂದ, ಪ್ರದೀಪ್ ಶೆಟ್ಟಿ, ಉಮೇಶ ಕೊರಗ, ಸುಧಾಕರ್, ತಿಮ್ಮ, ಭರತ್, ಕುಮಾರ, ಶಿವಾನಂದ, ಗುತ್ತಿಗೆದಾರರಾದ ಪ್ರಜ್ವಲ್ ಶೆಟ್ಟಿ, ಅದಾನಿ ಸಂಸ್ಥೆ ಏಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಷನ್ ಅನುದೀಪ್ ಉಪಸ್ಥಿತರಿದ್ದರು.