ಟೇಬಲ್ ಡ್ರಾವರ್​ನಲ್ಲಿತ್ತು ನಾಗರ! ಹೌಹಾರಿದ ಕೈಗಾ ಅಣು ವಿದ್ಯುತ್ ಸಿಬ್ಬಂದಿ

17KWR5- nagara
Published on

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಫೀಲ್ಡ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಯ ಟೇಬಲ್ ಒಂದರ ಡ್ರಾವರ್​ನಲ್ಲಿ ಶುಕ್ರವಾರ ನಾಗರ ಹಾವು ಅವಿತುಕೊಂಡು ಭೀತಿ ಹುಟ್ಟಿಸಿತ್ತು.


ಸುಮಾರು ನಾಲ್ಕೂವರೆ ಅಡಿ ಇದ್ದ ಹಾವು, ಟೇಬಲ್ ಡ್ರಾವರ್​ನಲ್ಲಿ ಬೆಚ್ಚಗೆ ಅವಿತು ಕುಳಿತಿದ್ದು, ಡ್ರಾವರ್ ತೆಗೆದ ಸಿಬ್ಬಂದಿ ಹೌಹಾರಿದ್ದರು.
ಕೈಗಾ ಪರಿಯೋಜನಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಖಡೆ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net