ಆಧುನಿಕ ಕಾಲದಲ್ಲಿ ಆಚರಣೆ ಹಾದಿ ತಪ್ಪುತ್ತಿವೆ

Kin_modern
Published on

ಕಿನ್ನಿಗೋಳಿ: ಇಂದಿನ ದಿನದಲ್ಲಿ ಆಚರಣೆಗಳು ಹಾದಿ ತಪ್ಪಿವೆ. ಸಿರಿ ಕುಮಾರನ ಸಂಬಂಧಗಳೇ ಗೊತ್ತಿಲ್ಲದ ಹಾಗೆ ನಡವಳಿಕೆಗಳು ಬದಲಾಗಿವೆ. ಶೋಷಣೆಗೊಳಗಾದವರು ಸಿರಿ ನಿಲ್ಲುತ್ತಾರೆ. ಸಿರಿ ಇಂದು ಹಣ ಮಾಡುವ ದಂಧೆಯಾಗಿ ಬದಲಾಗುತ್ತಿದೆ ಎಂದು ಸಂಶೋಧಕಿ, ಸಾಹಿತಿ ಡಾ.ಇಂದಿರಾ ಹೆಗ್ಡೆ ಹೇಳಿದರು.

ಕಿನ್ನಿಗೋಳಿ ಎಳತ್ತೂರುಗುತ್ತಿನಲ್ಲಿ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಹಾಗೂ ಎಸ್.ಆರ್.ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ವಾಂಸ ಕೆ.ಎಲ್.ಕುಂಡಂತಾಯ, ಉಪನ್ಯಾಸಕಿ ಡಾ.ಸುಧಾರಾಣಿ ಅವರು ಡಾ. ಇಂದಿರಾ ಹೆಗ್ಡೆ ಜತೆ ಸಂವಾದ ನಡೆಸಿದರು. ಇಂದಿರಾ ಹೆಗ್ಡೆ ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಲಾವಣ್ಯ ಶೆಟ್ಟಿ ಕವನಗಳನ್ನು ಹಾಡಿದರು. ಡಾ.ಇಂದಿರಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಕೃಷ್ಣಮೂರ್ತಿ, ಡಾ.ಜ್ಯೋತಿ ಚೇಳಾಯರು, ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಎರಿಕ್ ಪಾಯಸ್, ವೀಣಾ ಶಶಿಧರ್, ಸ್ವರಾಜ್ ಶೆಟ್ಟಿ, ಜೊಸ್ಸಿ ಪಿಂಟೋ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಳತ್ತೂರು ಗುತ್ತಿನಾರ್ ಬಾಲಕೃಷ್ಣ, ಸಂತೋಷ್ ಕುಮಾರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net