ಐದು ಟನ್ ಡ್ರಗ್ಸ್ ಪತ್ತೆ; ರಕ್ಷಣಾ ಅಧಿಕಾರಿಗಳು ಬಿಚ್ಚಿಟ್ರು ಸ್ಫೋಟಕ ಮಾಹಿತಿ.. | Andaman

Untitled design - 2024-11-25T142218.930
Published on

ಅಂಡಮಾನ್​​: ಭಾರತೀಯ ಕೋಸ್ಟ್ ಗಾರ್ಡ್ ಮಹತ್ವದ ಕಾರ್ಯಾಚರಣೆಯಲ್ಲಿ ಅಂಡಮಾನ್(Andaman) ನೀರಿನಲ್ಲಿ ಮೀನುಗಾರಿಕೆ ದೋಣಿಯಿಂದ ಸುಮಾರು ಐದು ಟನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಭಾರತೀಯ ಕೋಸ್ಟ್ ಗಾರ್ಡ್‌ನ ಇತಿಹಾಸದಲ್ಲೆ ಇದುವರೆಗೂ ವಶಪಡಿಸಿಕೊಂಡಿರುವ ಅತಿದೊಡ್ಡ ಮಾದಕವಸ್ತು ರವಾನೆ ಎಂದು ಹೇಳಲಾಗುತ್ತಿದೆ.

ವಶಪಡಿಸಿಕೊಂಡಿರುವ ಸರಕಿನಲ್ಲಿ ಸುಮಾರು ಐದು ಟನ್ ಡ್ರಗ್ಸ್ ಇದೆ ಎಂದು ರಕ್ಷಣಾ ಅಧಿಕಾರಿಗಳು ಸೋಮವಾರ(ನವೆಂಬರ್​​​ 25) ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಂಡಮಾನ್ ನೀರಿನಲ್ಲಿ ಈ ಕ್ರಮಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಅನುಮಾನಾಸ್ಪದ ವ್ಯಕ್ತಿಗಳ ತನಿಖೆ, ವಶಪಡಿಸಿಕೊಂಡ ಸರಕು ಮತ್ತು ದೋಣಿಗೆ ಸಂಬಂಧಿಸಿದ ವಿವರಗಳ ಕಾರ್ಯಾಚರಣೆ ಮುಂದುವರಿದಿದೆ. ಈ ಯಶಸ್ಸನ್ನು ಕಳ್ಳಸಾಗಣೆ ಜಾಲದ ಮೇಲಿನ ಕಠಿಣ ದಾಳಿ ಎಂದು ಪರಿಗಣಿಸಲಾಗಿದೆ. ಕಡಲ ಭದ್ರತೆ ಮತ್ತು ಡ್ರಗ್ಸ್ ವಿರುದ್ಧ ಭಾರತೀಯ ಕೋಸ್ಟ್ ಗಾರ್ಡ್​​​​ನ ಜಾಗರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕಾರ್ಯಾಚರಣೆಯ ನಂತರ ಕೋಸ್ಟ್ ಗಾರ್ಡ್ ಮತ್ತು ಇತರ ಸಂಬಂಧಪಟ್ಟ ಏಜೆನ್ಸಿಗಳು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲದ ವಿರುದ್ಧ ಹೆಚ್ಚು ಆಕ್ರಮಣಕಾರಿ ಕ್ರಮವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಈ ತಿಂಗಳ ಆರಂಭದಲ್ಲಿ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡವು, ಇದನ್ನು ಮೆಥ್ ಎಂದೂ ಕರೆಯುತ್ತಾರೆ. ಗುಜರಾತ್ ಕರಾವಳಿಯ ಭಾರತೀಯ ಪ್ರಾದೇಶಿಕ ಜಲದಿಂದ ಎಂಟು ಇರಾನ್ ಪ್ರಜೆಗಳನ್ನು ಬಂಧಿಸಿದರು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ 'ಸಾಗರ್ ಮಂಥನ್ - 4' ಹೆಸರಿನ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಾಚರಣೆಯನ್ನು ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ನಡೆಸಿದೆ.

ಈ ವರ್ಷ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು ಸಮುದ್ರ ಮಾರ್ಗದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ 3,500 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮೂರು ಪ್ರಕರಣಗಳಲ್ಲಿ 11 ಇರಾನ್ ಮತ್ತು 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಎನ್‌ಸಿಬಿ ಪ್ರಕಾರ ಈ ಎಲ್ಲಾ ವಿದೇಶಿಗರು ಪ್ರಸ್ತುತ ಜೈಲಿನಲ್ಲಿದ್ದಾರೆ ಮತ್ತು ನ್ಯಾಯಾಲಯದ ವಿಚಾರಣೆಗೆ ಕಾಯುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net