

ಅಹಮದಾಬಾದ್: ಇಡೀ ಜಗತ್ತಿನಲ್ಲಿ ಮಹಾಮಾರಿ ಕರೊನಾ ವೈರಸ್ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ. ಇಂತಹ ಸಂದಿಗ್ಧತೆಯಲ್ಲಿ ವೈದ್ಯರೆಲ್ಲರೂ ನೀಡುವ ಪ್ರಮುಖ ಸಲಹೆ ನಿಮ್ಮ ಕೈಗಳನ್ನು ಆಗಾಗ ಶುಚಿಗೊಳಿಸಿ. ಅದಕ್ಕಾಗಿ ಸ್ಯಾನಿಟೈಸರ್ ಬಳಸಿ ಎನ್ನುವುದು.
ಸ್ಯಾನಿಟೈಜರ್ ಸಂಕಷ್ಟ ಸಮಯದಲ್ಲಿ ಜೀವನಾಡಿಯಾಗಿದೆ. ಹೀಗಾಗಿ ಗುಜರಾತಿನ ಅಹಮದಬಾದ್ನಲ್ಲಿರುವ ಪ್ರೀಮಿಯರ್ ಇನ್ಸ್ಟಿಟ್ಯೂಟ್ ಸ್ಯಾನಿಟೈಸರ್ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್ ಸುರಂಗವನ್ನೇ ನಿರ್ಮಾಣ ಮಾಡಿದೆ.
ಅಸರ್ವಾದ ಕಿಡ್ನಿ ರೋಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಯಾನಿಟೈಸರ್ ಸುರಂಗವಾಗಿ ಮಾರ್ಪಾಡು ಮಾಡಲಾಗಿದೆ. ಸುರಂಗದ ಒಳ ಹೋದಾಗಲೆಲ್ಲಾ ಸ್ಯಾನಿಟೈಸರ್ ಮಳೆಯಾಗುತ್ತದೆ. ಇದಕ್ಕೆ ಸಂಬಂಧಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಸುರಂಗದಲ್ಲಿ ಹೊರಭಾಗದಲ್ಲಿ ನಿಂತಿರುವ ಸೆಕ್ಯುರಿಟಿ ಗಾರ್ಡ್ ಒಳಹೋಗುವ ವ್ಯಕ್ತಿಗೆ ಪ್ರವೇಶ ದ್ವಾರದಲ್ಲೇ ಹ್ಯಾಂಡ್ ಸ್ಯಾನಿಟೈಸರ್ ನೀಡುತ್ತಾರೆ. ಬಳಿಕ ಸುರಂಗ ಪ್ರವೇಶಿಸುವ ವ್ಯಕ್ತಿಯ ಮೇಲೆ ಸ್ವಯಂಚಾಲಿತವಾಗಿ ಸ್ಯಾನಿಟೈಸರ್ ಮಳೆಯಾಗುತ್ತದೆ. (ಏಜೆನ್ಸೀಸ್)