More

    ‘ಹುಡಗ ಹುಡುಗಿ’ ನಟಿ ಜತೆ ಆಮಿರ್ ಸೋದರಳಿಯ ಡೇಟಿಂಗ್; ಲೇಖಾ ವಾಷಿಂಗ್ಟನ್ ಜತೆ ಸಂಬಂಧ ಖಚಿತಪಡಿಸಿದ ಇಮ್ರಾನ್ ಖಾನ್

    ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ತಮ್ಮ ವೈಯಕ್ತಿಕ ಬದುಕಿನ  ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ನಟಿ ಲೇಖಾ ವಾಷಿಂಗ್ಟನ್ ಜತೆಗೆ ಇರುವ ಸಂಬಂಧದ ಕುರಿತಾಗಿ ಓಪನ್​ ಆಗಿ ಮಾತನಾಡುವ ಮೂಲಕವಾಗಿ ಖಚಿತ ಪಡಿಸಿದ್ದಾರೆ.

    ಇಮ್ರಾನ್ ಖಾನ್ ಸಿನಿಮಾಗಳನ್ನು ನೋಡುವುದಕ್ಕಂತಲೇ ಒಂದು ವರ್ಗವಿತ್ತು. ಇನ್ನು ಸೋದರಳಿಯನಿಗಾಗಿಯೇ ಆಮಿರ್ ಖಾನ್ ಸಿನಿಮಾವನ್ನೂ ನಿರ್ಮಾಣ ಮಾಡಿದ್ದರು. ಇಮ್ರಾನ್ ಖಾನ್ ವೈಯಕ್ತಿಕ ಬದುಕು ಅಷ್ಟೊಂದು ಚೆನ್ನಾಗಿಲ್ಲ.

    ಅವಂತಿಕಾ ಮಲಿಕ್ ಇಮ್ರಾನ್ ಖಾನ್ ಅವರ ಬಾಲ್ಯದ ಗೆಳತಿಯಾಗಿದ್ದರು. ತಮ್ಮ ಸಂಬಂಧಕ್ಕೆ ಈ ಜೋಡಿ 2011ರಲ್ಲಿ ಮದ್ವೆಯ ಮುದ್ರೆ ಒತ್ತಿದ್ದರು. ಮದ್ವೆಯಾಗಿ ಮೂರು ವರ್ಷದಲ್ಲೇ ಹೆಣ್ಣು ಮಗುವನ್ನು ಈ ಜೋಡಿ ಬರಮಾಡಿಕೊಂಡಿತ್ತು,. ಆದರೆ ಅದೇನಾಯ್ತೋ ಏನೋ 2019ರ ಹೊತ್ತಿಗೆಲ್ಲಾ ಇಬ್ಬರು ವಿಚ್ಛೇದನ ಪಡೆದಿದ್ದರು.

    ಪತ್ನಿ ಅವಂತಿಕಾ ಮಲಿಕ್‌ನಿಂದ ದೂರಾದ ಬಳಿ ಇಮ್ರಾನ್ ಖಾನ್ ವೈಯಕ್ತಿಕ ಜೀವನದಲ್ಲಿ  ನಟಿ ಲೇಖಾ ವಾಷಿಂಗ್ಟನ್  ಎಂಟ್ರಿಯಾಗಿದ್ದಾರೆ. ಅವಂತಿಕಾ ಜೊತೆಗಿನ ಸಂಬಂಧ ಹಳಸಲು ಲೇಖಾ ವಾಷಿಂಗ್ಟನ್ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲಾ ವಿಚಾರಗಳಿಗೆ ಈಗ ಇಮ್ರಾನ್ ಖಾನ್ ತೆರೆ ಎಳೆದಿದ್ದಾರೆ. 

    ಸಂದರ್ಶನವೊಂದರಲ್ಲಿ ಮಾತನಾಡಿದ ಇಮ್ರಾನ್ ಖಾನ್, ನನ್ನ ಹಾಗೂ ಅವಂತಿಕಾ ಮಲಿಕ್ ನಡುವೆ 2019ರಲ್ಲೇ ವಿಚ್ಛೇದನವಾಗಿದೆ. ಕೆಲ ಸಮಯದಿಂದ ಲೇಖಾ ವಾಷಿಂಗ್ಟನ್ ಜತೆ ತಾನು ಸಂಬಂಧದಲ್ಲಿದ್ದೇನೆ. ಲೇಖಾಳನ್ನು ಅನೇಕರು ಮನೆ ಮುರುಕಿ ಎಂದು ಕರೆಯುತ್ತಾರೆ. ಇದು ನನ್ನ ಹೊಟ್ಟೆ ಉರಿಸುತ್ತಿದೆ. ಲೇಖಾ ಹಾಗೂ ನಾನು ಲಾಕ್‌ಡೌನ್ ಸಮಯದಲ್ಲಿ ಪರಸ್ಪರ ಹತ್ತಿರವಾದೆವು. ನಾನು ಹಾಗೂ ಅವಂತಿಕಾ ಪರಸ್ಪರ ದೂರಾಗಿ  ಒಂದು ವರ್ಷದ ನಂತರ ಲೇಖಾ ಹಾಗೂ ನನ್ನ ನಡುವೆ ಬಾಂಧವ್ಯ ಶುರುವಾಯ್ತು. ಆಕೆ ಆಕೆಯ ಪತಿ ಅಲ್ಲ ಸಂಗಾತಿಯಿಂದ ದೂರಾಗಿದ್ದಳು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    2008ರಲ್ಲಿ ಜಾನೇ ತು ಜಾನೇ ನಾ ಮೂಲಕ ಬಾಲಿವುಡ್‌ಗೆ ಬಂದ ಇಮ್ರಾನ್ ಖಾನ್, ಕಿಡ್ನಾಪ್, ಮೆರೆ ಬ್ರದರ್ ಕಿ ದುಲ್ಹಾನ್, ಐ ಹೇಟ್ ಲವ್ ಸ್ಟೋರಿಸ್, ದೆಲ್ಲಿ ಬೆಲ್ಲಿ, ಗೋರಿ ತೇರೆ ಪ್ಯಾರ್ ಮೇ  ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಮ್ರಾನ್ ಖಾನ್ ಸಿನಿಮಾದಿಂದ ದೂರ ಉಳಿದಿದ್ದರೂ, ಈತನ ಪರ್ಸನಲ್ ಲೈಫ್ ಮಾತ್ರ ಆಗಾಗ ಚರ್ಚೆಗೆ ಬರುತ್ತಿದೆ.

    ಲೇಖಾ ವಾಷಿಂಗ್‌ಟನ್ ಮೊದಲು ನಿರೂಪಕಿಯಾಗಿ ಕೆಲಸ ಮಾಡಿದ್ದು ಕೂಡ ತಮಿಳು ಚಾನೆಲ್ ಒಂದಕ್ಕೆ. ಹಾಗೇ ಸಿನಿಮಾಗಳಲ್ಲಿ ನಟಿಸಿದ್ದು ಕೂಡ ತಮಿಳು ಸಿನಿಮಾನೇ. ಹಾಗೇ ಕನ್ನಡದಲ್ಲೂ ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅದುವೇ ‘ಹುಡುಗ ಹುಡುಗಿ’. ಧ್ಯಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಲೇಖಾ ವಾಷಿಂಗ್‌ಟನ್ ನಾಯಕಿಯಾಗಿ ನಟಿಸಿದ್ದರು. ಬಳಿಕ ಲೇಖಾ ಕೂಡ ಚಿತ್ರರಂಗದಿಂದ ದೂರವೇ ಉಳಿದಿದ್ದರು.



    https://www.vijayavani.net/parineeti-chopra-pregnant-netizens-share-their-theories-speculating-good-news-for-actor-and-raghav-chadha

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts