

ಹೆಬ್ರಿ: ಜನರು ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ. ರಕ್ತ ನೀಡುವುದರಿಂದ ನಮ್ಮಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ. ಮುದ್ರಾಡಿ ಪರಿಸರದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಮುದ್ರಾಡಿಯ ಹಿರಿಯ ವೈದ್ಯ ಡಾ.ಎಂ.ಎಸ್.ರಾವ್ ಹೇಳಿದರು.
ಮುದ್ರಾಡಿ ಶಾಲೆಯಲ್ಲಿ ನಡೆದ ಸಾರ್ವಜನಿಕ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸನತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಶ್ರೀ ಗುರುರಕ್ಷಾಚಾರ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಪಿಡಿಒ ಅಮೃತ ಕುಲಾಲ್, ವೈದ್ಯರಾದ ಡಾ.ವೀಣಾ ಕುಮಾರಿ, ಡಾ.ರಮಾಮಣಿ, ಡಾ.ದಿವ್ಯಶ್ರೀ, ಗ್ರಾಪಂ ಸದಸ್ಯ ಗಣಪತಿ ಎಂ., ಎಸ್‌ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ, ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಮದಗ ಫ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು.