

ಕೋಟ: ಜನತಾ ಫಿಶ್‌ಮೀಲ್ ಮತ್ತು ಆಯಿಲ್ ಪ್ರಾಡಕ್ಟ್ಸ್ ವತಿಯಿಂದ ಮಣೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಜೆಪಿಎಲ್ ಟೂರ್ನಿ ಆಯೋಜಿಸಲಾಯಿತು.
ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್, ವಾಹಿನಿ ಯುವಕ ಮಂಡಲ ರಮೇಶ್ ಕುಂದರ್, ಸ್ಥಳೀಯ ಕ್ರೀಡಾ ಪ್ರೋತ್ಸಾಹಕ ಪ್ರಭಾಕರ್ ಕುಂದರ್, ಜನತಾ ಸಂಸ್ಥೆ ನಿರ್ದೇಶಕರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಸಂಸ್ಥೆ ಎಜಿಎಂ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕ ಮಿಥುನ್‌ಕುಮಾರ್ ಉಪಸ್ಥಿತರಿದ್ದರು.
ರವಿಕಿರಣ ಕೋಟ ನಿರೂಪಿಸಿದರು. ಜನತಾ ಸಂಸ್ಥೆ ಸಿಬ್ಬಂದಿ ನಡುವೆ ನಡೆದ ಪಂದ್ಯಾಟದಲ್ಲಿ ಸಮಬಲದ ಹೋರಾಟದಲ್ಲಿ ಜನತಾ ಭಗತ್ ಇಲೆವೆನ್ ತಂಡ ಜಯಶಾಲಿಯಾಗಿ ಜನತಾ ಬೃಂದಾವನ ತಂಡ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು. ಕ್ರೀಡಾಕೂಟ ವೀಕ್ಷಿಸಿದ ಜನತಾ ಸಿಬ್ಬಂದಿಗೆ ಲಕ್ಕಿ ಡಿಪ್ ನೀಡಿ ಅದರ ವಿಜಯಶಾಲಿಗಳಿಗೆ ಸೈಕಲ್, ಸ್ಮಾರ್ಟ್ ವಾಚ್, ಇಯರ್ ಬಡ್‌ಗಳನ್ನು ಸಂಸ್ಥೆ ನಿರ್ದೇಶಕ ಪ್ರಶಾಂತ್ ಕುಂದರ್ ವಿತರಿಸಿದರು.