ಸುಧಾರಿಸಿದ ವಸತಿ ನಿಲಯ, ಆಸ್ಪತ್ರೆ ಸಮಸ್ಯೆ

FotoJet (1)
Published on

ದಂಡಾಧಿಕಾರಿ ಮಹೇಶ್. ಎಸ್ ಪತ್ರಿ ಮಾಹಿತಿ ತಾಯಿ- ಮಕ್ಕಳ ಆಸ್ಪತ್ರೆಗೆ ಭೇಟಿ

ಗೌರಿಬಿದನೂರು: ನಗರದಲ್ಲಿ ಸರ್ಕಾರಿ ವಸತಿ ನಿಲಯ ಹಾಗೂ ಸರ್ಕಾರಿ ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ಮೊದಲಿಗಿಂತಲೂ ಈಗ ಸಮಸ್ಯೆಗಳು ಸುಧಾರಿಸಿವೆ ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ತಿಳಿಸಿದರು.

ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯಗಳು ಹಾಗೂ ಮಹಿಳಾ ಮಕ್ಕಳ ಅಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ವಸತಿ ನಿಲಯಗಳಲ್ಲಿ ಹಿಂದಿಗಿಂತಲೂ ಪರಿಸ್ಥಿತಿ ಸುಧಾರಿಸಿದೆ. ಹಿಂದೆ ಭೇಟಿ ನೀಡಿದಾಗ ಹೆಚ್ಚು ಸಮಸ್ಯೆಗಳು ಇದ್ದವು. ಒಂದೇ ಕೊಠಡಿಯಲ್ಲಿ ಇಷ್ಟ ಬಂದಂತೆ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗುತ್ತಿತ್ತು. ಈಗ ಒಂದು ಕೊಠಡಿಗೆ ಮೂರು ವಿದ್ಯಾರ್ಥಿಗಳು ಹಾಗೂ ಮೂರು ಮಂಚಗಳನ್ನು ಒದಗಿಸಲಾಗಿದೆ. ಶೌಚಗೃಹ ಸ್ವಚ್ಛವಾಗಿದೆ. ಊಟದ ವ್ಯವಸ್ಥೆ ಸರಿಯಾಗಿದೆ ಎಂದು ವಿದ್ಯಾರ್ಥಿಗಳಿಂದ ತಿಳಿದು ಬಂದಿದೆ ಎಂದರು.

ವಸತಿ ನಿಲಯದಲ್ಲಿ ಅಂತರ್ಜಾಲ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ ಎಂದು ಮಹೇಶ್ ಎಸ್. ಪತ್ರಿ ತಿಳಿಸಿದರು.

ಆಸ್ಪತ್ರೆಯಲ್ಲಿ ಹೆಚ್ಚು ಸಮಸ್ಯೆ ಸುಧಾರಣೆ ಕಂಡಿದ್ದರೂ ವೈದ್ಯರು ಸ್ಥಳೀಯವಾಗಿ ವಾಸವಿರದ ಕಾರಣ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕ್ಷ -ಕಿರಣ ತಂತ್ರಜ್ಞ (ಎಕ್ಸೃ್ರೇ ಟೆಕ್ನಿಷಿಯನ್) ಇಲ್ಲದಿರುವುದರಿಂದ ಸಮಸ್ಯೆ ಉಂಟಾಗಿದೆ. ಒಬ್ಬರೇ ಇದ್ದು ಹೊಸೂರು ಹಾಗೂ ಇಲ್ಲಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ಇದರ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ, ವೈದ್ಯ ಡಾ.ಲಕ್ಮಿಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net