ಕೋಟಿ-ಚೆನ್ನಯರ ಜೀವನ ಸಿದ್ಧಾಂತ ಅಳವಡಿಕೆ

Ism_Koti-Chennai's
Published on

ಪುತ್ತೂರು ಗ್ರಾಮಾಂತರ: ತಾಯಂದಿರಿಗೆ ಸಮಾಜ ಮತ್ತು ಸಂಸಾರ ತಿದ್ದುವ ಅದ್ಭುತ ಶಕ್ತಿ ಇದೆ. ನಾರಾಯಣ ಗುರುಗಳ ಸಿದ್ಧಾಂತದ ಹಾಗೆಯೇ ಕೋಟಿ-ಚೆನ್ನಯರ ಬದುಕಿನ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಪ್ರಜ್ಞಾವಂತ ನಾಗರಿಕರಾಗಿ ಬದುಕಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಕ್ಷೇತ್ರಾಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಸ್ವರಮಾಧುರ್ಯ ಸಂಗೀತ ಬಳಗದ ಸಾರಥ್ಯದಲ್ಲಿ ಪ್ರಜ್ಞಾ ಮತ್ತು ಅಜಿತ್‌ಕುಮಾರ್ ಗೋಳಿತೊಟ್ಟು ನಿರ್ಮಾಣದ, ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ಸಾಹಿತ್ಯವಿರುವ, ಕಾವ್ಯಶ್ರೀ ಗಡಿಯಾರ ಮತ್ತು ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಹಾಡಿರುವ ಗೆಜ್ಜೆಗಿರಿ ಕ್ಷೇತ್ರದ ಕುರಿತಾದ ‘ಗೆಜ್ಜೆಗಿರಿತ ಅಮರ್ ಬೊಳ್ಳಿಲು’ ತುಳು ವಿಡಿಯೋ ಆಲ್ಬಂ ಸಾಂಗ್ ಅನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net