ಐಎಂಜೆ ಪದವಿ ಕಾಲೇಜು, ಎಂಎಫ್‌ಕೆ ಫೌಂಡೇಶನ್ ಶೈಕ್ಷಣಿಕ ಒಡಂಬಡಿಕೆ

gan (3)
Published on

ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯ ಸಂಘದ ಸಹಯೋಗದೊಂದಿಗೆ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ‘ಫೈನಾನ್ಸಿಯಲ್ ಸ್ಕಿಲ್ ಡೆವಲಪ್‌ಮೆಂಟ್’ ವಿಷಯದ ಕುರಿತು ಕಾರ್ಯಾಗಾರ ನಡೆಯಿತು. ಬೆಂಗಳೂರಿನ ಎಂ.ಎಫ್.ಕೆ. ಫೌಂಡೇಶನ್ ಮತ್ತು ಮೂಡ್ಲಕಟ್ಟೆ ಪದವಿ ಕಾಲೇಜಿನ ನಡುವೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಬೆಂಗಳೂರಿನ ಎಂ.ಎಫ್.ಕೆ ಫೌಂಡೇಶನ್‌ನ ಸಾಂಸ್ಥಿಕ ಪಾಲುದಾರಿಕೆಗಳ ಮುಖ್ಯಸ್ಥೆ ಅರ್ಪಣಾ ಭಟ್ ಮಾತನಾಡಿದರು. ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವದ ಬಗ್ಗೆ ಮತ್ತು ಕಾರ್ಪೊರೇಟ್ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಾಯೋಗಿಕ ತರಬೇತಿ ಕೌಶಲ ಮತ್ತು ವೃತ್ತಿಪರ ಸಂಪನ್ಮೂಲಗಳನ್ನು ಪಡೆದುಕೊಳ್ಳಬೇಕಾದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಪ್ರತಿಭಾ ಎಂ.ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಜಯಶೀಲ್‌ಕುಮಾರ್, ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿ ದೀಕ್ಷಾ ಹರೀಶ್ ಜೆಪ್ಪು, ಉಪನ್ಯಾಸಕರು ಹಾಗೂ ಬಿಕಾಂ ಮತ್ತು ಬಿಎ ವಿದ್ಯಾರ್ಥಿಗಳುಉಪಸ್ಥಿತರಿದ್ದರು.

ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಂಕಿತಾ ಕೆ.ಶೆಣೈ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅಲ್ಫಿದಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net