ವಿವಾದದ ನಡುವೆಯೇ ಚಿನ್ನ ಗೆದ್ದ ಇಮಾನೆ ಖೇಲಿಫ್! ಇದೇ ‘ಯಶಸ್ಸಿನ ವಿಶೇಷ ಅಭಿರುಚಿ’ ಎಂದ ಚಾಂಪಿಯನ್

ಪ್ಯಾರಿಸ್​: ಆ.01ರಂದು ನಡೆದ ಪ್ಯಾರಿಸ್​ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿತ್ತು. ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದಿದ್ದರು. ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಡುವ ಮೂಲಕ ದೊಡ್ಡ ವಿವಾದವನ್ನೇ ಹುಟ್ಟುಹಾಕಿದರು. ಈ ವಿಷಯ ಜಾಗತಿಕ ಮಟ್ಟದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ಸಮಂತಾ ಜತೆಗಿನ ಎಲ್ಲ ನೆನಪು ಚೈತನ್ಯ ಡಿಲೀಟ್​​ ಮಾಡಿದ್ರು..ಆ ಒಂದು ಫೋಟೋ ಮಾತ್ರ ಹಾಗೇ ಇದೆ! ಯಾಕೆ ಗೊತ್ತಾ?

ಅಸಲಿಗೆ ಅಲ್ಜೀರಿಯಾದ ಇಮಾನೆ ಖೇಲಿಫ್ ಮಹಿಳೆಯಲ್ಲ, ಪುರುಷ. 2023ರ ಒಲಿಂಪಿಕ್ಸ್​ನಲ್ಲಿ ಆಕೆ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಹೀಗಿದ್ದಮೇಲೆ ಏಕೆ ಅವರನ್ನು ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆಡಲು ಅವಕಾಶ ಕೊಡಬೇಕಿತ್ತು? ಎಂದು ಅನೇಕ ಕ್ರೀಡಾಪಟುಗಳು ಖೇಲಿಫ್​ ವಿರುದ್ಧ ಕಿಡಿಕಾರಿದ್ದರು. ಇದಕ್ಕೆಲ್ಲಾ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಇದಾದ ಬಳಿಕವೂ ಇಮಾನೆ ವಿರುದ್ಧ ಟೀಕೆಗಳು ಮುಂದುವರೆದಿತ್ತು. ಭಾರೀ ವಿವಾದಗಳ ನಡುವೆಯೂ ಬಾಕ್ಸಿಂಗ್​ ಫೈನಲ್​ ತಲುಪಿದ್ದ ಖೇಲಿಫ್ ಇದೀಗ ಅಂತಿಮ ಕಾಳಗದಲ್ಲಿ ಚಿನ್ನ ಗೆದ್ದು ಮಿಂಚಿದ್ದಾರೆ.

ಮಹಿಳೆಯರ ವೆಲ್ಟರ್‌ವೇಟ್ ವಿಭಾಗದ ಫೈನಲ್‌ನಲ್ಲಿ ಖೇಲಿಫ್ ಚೀನಾದ ಯಾಂಗ್ ಲಿಯುರನ್ನು 5:0 ಅಂತರದಿಂದ ಮಣಿಸಿ, ವಿಜಯ ಪತಾಕೆ ಹಾರಿಸಿದರು. ತಮ್ಮ ಬಾಕ್ಸಿಂಗ್ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಖೆಲಿಫ್​ಗೆ ಕ್ರೀಡಾ ಅಭಿಮಾನಿಗಳು ಜೈಕಾರ ಕೂಗಿದ್ದಾರೆ. ಅಲ್ಜೀರಿಯಾದ ಧ್ವಜವನ್ನು ಬೀಸಿ, ಚಾಂಪಿಯನ್​ ಹೆಸರು ಚೀರಾಡಿದ ಫ್ಯಾನ್ಸ್​, ಇಮಾನೆ ಪೋಡಿಯಂ ಹತ್ತುತ್ತಿದ್ದಂತೆ ಚಪ್ಪಾಳೆ ತಟ್ಟಿ, ಗೌರವಿಸಿದ್ದಾರೆ.

ಇದನ್ನೂ ಓದಿ: ನಾನು ಸಿಂಗಲ್ ಎಂದೂ ಯಾವತ್ತೂ ಹೇಳಿಲ್ಲ.. ಕೀರ್ತಿ ಸುರೇಶ್ ಇಂಟರೆಸ್ಟಿಂಗ್ ಕಾಮೆಂಟ್ಸ್!

ಗೆಲುವು ಹಾಗೂ ವಿವಾದದ ಬಗ್ಗೆ ಕೇಳಿದಕ್ಕೆ ಉತ್ತರಿಸಿದ ಖೇಲಿಫ್, “ಕಳೆದ ಎಂಟು ವರ್ಷಗಳಿಂದ ಈ ಒಂದು ಸಮಯಕ್ಕಾಗಿ ಕಾದಿದ್ದೆ. ಇದು ನನ್ನ ಕನಸಾಗಿತ್ತು. ಈಗ ನಾನು ಒಲಿಂಪಿಕ್​ ಚಾಂಪಿಯನ್, ಕೊರಳಿನಲ್ಲಿ ಚಿನ್ನವಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದ ವಿರೋಧಗಳು, ಟೀಕೆಗಳನ್ನು ಗಮನಿಸಿದೆ. ನನ್ನ ಗೆಲುವಿಗೆ ಅವೆಲ್ಲವೂ ಕಾರಣ. ಇದು ಯಶಸ್ಸಿನ ವಿಶೇಷ ಅಭಿರುಚಿ” ಎಂದು ಹೇಳುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ಪಾಕ್​ಗೆ ಸಲಹೆ ಕೊಡುವ ಮೊದಲು ನಿಮ್ಮ ಪ್ರದರ್ಶನ ಹೇಗಿದೆ ನೋಡ್ಕೊಳ್ಳಿ: ತನ್ವಿರ್​ ವ್ಯಂಗ್ಯ

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…