ರಾಜಭವನದಲ್ಲಿ ನಾನು ಸುರಕ್ಷಿತವಾಗಿಲ್ಲ.. ಬಂಗಾಳ ರಾಜ್ಯಪಾಲರ ಸೆನ್ಸೇಷನಲ್ ಕಾಮೆಂಟ್!

1 Min Read
ರಾಜಭವನದಲ್ಲಿ ನಾನು ಸುರಕ್ಷಿತವಾಗಿಲ್ಲ.. ಬಂಗಾಳ ರಾಜ್ಯಪಾಲರ ಸೆನ್ಸೇಷನಲ್ ಕಾಮೆಂಟ್!

ಕೋಲ್ಕತ್ತಾ: ರಾಜಭವನದಲ್ಲಿ ಭದ್ರತೆ ಇಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಅವರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ತಮ್ಮ ಕಚೇರಿಯು ಸಂಪೂರ್ಣ ಪಶ್ಚಿಮ ಬಂಗಾಳ ಪೊಲೀಸ್​ ಸಿಬ್ಬಂದಿಯನ್ನು ಹೊಂದಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೀಲ್ಸ್​ಗೆ ಮರುಳಿದ ನಿವೇದಿತಾಗೌಡ.. ಏನಾದ್ರೂ ಮಾಡ್ಕೋ ತಾಯಿ ಶೆಡ್‌ ಸಹವಾಸ ಬೇಡಪ್ಪಾ ಎಂದ್ರು ನೆಟ್ಟಿಗರು!

ರಾಜಭವನ ಆವರಣವನ್ನು ಖಾಲಿ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದ ಕೆಲವು ದಿನಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದರೂ ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಪ್ರಭಾರಿ ಅಧಿಕಾರಿ ಮತ್ತು ಅವರ ತಂಡ ಇರುವುದರಿಂದ ನನ್ನ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ಉಂಟಾಗಿದೆ. ಈ ಕುರಿತು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೋಸ್ ಬೇಸರ ವ್ಯಕ್ತಪಡಿಸಿದರು.

ರಾಜಭವನದಲ್ಲಿರುವ ಪೊಲೀಸ್ ಸಿಬ್ಬಂದಿ ತನ್ನ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ ಎಂದು ಬೋಸ್ ರಾಜ್ಯ ಸರ್ಕಾರಕ್ಕೆ ದೂರಿದ್ದರು. ಕೆಲವರ ಪ್ರಭಾವಕ್ಕೆ ಒಳಗಾಗಿ ಪೊಲೀಸ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಅವರನ್ನು ತೆಗೆದು ಹಾಕಿ ಹೊಸಬರನ್ನು ನೇಮಿಸುವಂತೆ ಅವರು ಮನವಿ ಮಾಡಿದ್ದಾರೆ.

‘ನೀವು ನೀವಾಗಿರಿ..ಇನ್ನೊಬ್ಬರಿಗಾಗಿ ಬದಲಾಗುವುದು ಬೇಡ’: ಪ್ರಿಯಾಂಕಾ ಚೋಪ್ರಾ ಹೀಗೆನ್ನಲು ಕಾರಣವಿದೆ ನೋಡಿ..

See also  ಯಾವುದೇ ಕ್ಷಣದಲ್ಲಿ ಹೊರಬೀಳಬಹುದು ಆಕ್ಸ್​ಫರ್ಡ್​ ಕರೊನಾ ಲಸಿಕೆಯ ಶುಭಸುದ್ದಿ...!
Share This Article