ಅಪ್ರಾಪ್ತ ಬಾಲಕನ ಜೊತೆ ಅಕ್ರಮ ಸಂಬಂಧ; ನೋಡಿದ 6 ವರ್ಷದ ಪುಟ್ಟ ಮಗಳನ್ನೇ ಕೊಲೆಗೈದ ಪಾಪಿ ತಾಯಿ|Murder

Murder 5
Published on

Murder: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದ್ರಾ ರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಮಹಿಳೆಯೊಬ್ಬಳು ಅಪ್ರಾಪ್ತ ಬಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅದನ್ನು ನೋಡಿದ್ದ ತನ್ನ ಮಗಳನ್ನೇ ಪ್ರಿಯಕರನ ಜೊತೆ ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಭಾನುವಾರ (ಸೆ. 07) ವರದಿಯಾಗಿದೆ.

ಉರ್ವಿ ಕೊಲೆಯಾಗಿರುವ ಬಾಲಕಿ. ಬಾಲಕಿ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದ್ದು, ಆಕೆಯ ಸ್ವಂತ 30 ವರ್ಷದ ತಾಯಿ ಮತ್ತು 17 ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ನಂತರ ಮಧ್ಯಾಹ್ನ 1.30ರ ಸುಮಾರಿಗೆ ಅವಳ ಶವ ಬಾವಿಯೊಳಗೆ ಪತ್ತೆಯಾಗಿದ್ದು, ಸೆಣಬಿನ ಚೀಲದಲ್ಲಿ ತುಂಬಿ ಎಸೆಯಲಾಗಿತ್ತು ಎಂದು ತಿಳಿದು ಬಂದಿದೆ.

ಬಾಲಕಿ ಕೊಲೆ ಕುರಿತು ಎಎಸ್​ಪಿ ಹೇಳಿದ್ದೇನು?

ಘಟನೆ ಕುರಿತು ಮಾಹಿತಿ ನೀಡಿರುವ ಎಎಸ್​ಪಿ ಅಶೋಕ್ ಕುಮಾರ್ ಸಿಂಗ್, ಬಂಧಿತ ಮಹಿಳೆ ಮತ್ತು ಅಪ್ರಾಪ್ತ ಬಾಲಕ ಅಕ್ರಮ ಸಂಬಂಧ ಹೊಂದಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಬಾಲಕಿ ನೋಡಿದ್ದಾಳೆ. ಈ ವೇಳೆ ಬಾಲಕಿ ತನ್ನ ತಂದೆಗೆ ಹೇಳುವುದಾಗಿ ಬೆದರಿಸಿದ್ದು, ಅವಳು ಮನೆಯಿಂದ ಆಚೆ ಹೋಗುವಾಗ ಹಿಡಿದು ಇಬ್ಬರು ಆಕೆಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಸುಮಾರು 30 ವರ್ಷ ವಯಸ್ಸಿನ ಮಹಿಳೆ, 17 ವರ್ಷದ ಹುಡುಗನೊಂದಿಗೆ ಸುಮಾರು ಮೂರು ತಿಂಗಳಿನಿಂದ ಅಕ್ರಮ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಘಟನೆ ನಡೆದ ದಿನ, ತನ್ನ ಪತಿ ಮತ್ತು ಅತ್ತೆ ಹೊರಗೆ ಹೋದಾಗ, ಅವಳು ಹುಡುಗನನ್ನು ಮನೆಗೆ ಆಹ್ವಾನಿಸಿದ್ದಾಳೆ. ಈ ವೇಳೆ ಇಬ್ಬರು ರೂಮ್​ನಲ್ಲಿದ್ದಾಗ ಬಾಲಕಿ ಬಂದು ನೋಡಿದ್ದು, ತಂದೆಗೆ ಹೇಳುವುದಾಗಿ ಬೆದರಿಸಿದ್ದಾಳೆ. ಬಳಿಕ ಬಾಲಕಿಯನ್ನು ಕೊಂದು ಅವಳ ದೇಹವನ್ನು ಚೀಲದಲ್ಲಿ ಕಟ್ಟಿ  ಪಾಳುಬಿದ್ದ ಬಾವಿಗೆ ಎಸೆದಿದ್ದಾರೆ ಎಂದಿದ್ದಾರೆ.

ಬಂಧನದ ಸಮಯದಲ್ಲಿ ಮಹಿಳೆಯ ಕೈಯಲ್ಲಿ ಕಚ್ಚಿದ ಗುರುತುಗಳಿದ್ದವು, ಅವು ಬಾಲಕಿ ತಪ್ಪಿಸಿಕೊಳ್ಳುವ ಹೋರಾಟದಲ್ಲಿ ಮಾಡಿರಬಹುದಾದ ಗಾಯ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net