ಈ ಫೋಟೋದಲ್ಲಿರುವ ಬಾಲಕಿ ಇಂದು ಸ್ಟಾರ್​ ನಟಿ! ಖ್ಯಾತ ಹೀರೋಯಿನ್​ ಗಂಡನ ಜತೆ ಈಕೆಗಿತ್ತು ಅಫೇರ್! Actress Childhood Photo

Actress Childhood Photo
Published on

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಆಟಿಕೆ ಕುದುರೆ ಮೇಲೆ ಬಾಲಕಿಯೊಬ್ಬಳು ಕುಳಿತಿದ್ದಾಳೆ. ಈ ಬಾಲಕಿ ಸಾಮಾನ್ಯ ಬಾಲಕಿಯಲ್ಲ. ತಮಿಳು ಚಿತ್ರರಂಗದ ಸ್ಟಾರ್​ ನಟಿ ಈಕೆ. ವಿಜಯ್​, ವಿಶಾಲ್​, ಕಾರ್ತಿ ಹಾಗೂ ಕಮಲ್​ ಹಾಸನ್​ ಸೇರಿದಂತೆ ಸ್ಟಾರ್​ ನಟರ ಜೊತೆ ನಟಿಸಿದ್ದಾರೆ. ಅಲ್ಲದೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಕೆ ಕೇವಲ ನಟಿ ಮಾತ್ರವಲ್ಲ ಗಾಯಕಿ ಕೂಡ ಹೌದು. ನಟನೆ ಮಾತ್ರವಲ್ಲ, ವಿವಾದಗಳಿಂದಲೂ ಈಕೆ ಅನೇಕ ಬಾರಿ ಸುದ್ದಿಯಾದರು. ನಟಿ ಸೋನಿಯಾ ಅಗರ್ವಾಲ್​ ಅವರ ಮಾಜಿ ಗಂಡನ ಜೊತೆ ಅಫೇರ್​ ಇಟ್ಟುಕೊಂಡು ಭಾರಿ ಸುದ್ದಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ಜೊತೆಗಿನ ಪ್ರೇಮ ಪ್ರಸಂಗ ಕೂಡ ಚರ್ಚೆಯಾಗಿತ್ತು. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.

ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸ್ಟಾರ್​ ನಟಿ ಆಂಡ್ರಿಯಾ ಜೆರೆಮಿಯಾ. ಕಾಲಿವುಡ್​ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್​ ಲುಕ್​ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಆಂಡ್ರಿಯಾ, ಒಮ್ಮೆ ತನ್ನ ಅಫೇರ್​ನಿಂದಲೇ ಬಹಳ ಸುದ್ದಿಯಾಗಿದ್ದರು. ಹೌದು, ವಿವಾಹಿತ ನಿರ್ದೇಶಕನ ಜತೆ ಆಂಡ್ರಿಯಾ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದರು. ಇದು ಅವರ ಜೀವನದ ಅತ್ಯಂತ ಕಹಿ ಕ್ಷಣಗಳೆಂದು ಆಂಡ್ರಿಯಾ ಹಿಂದೊಮ್ಮೆ ಟಿವಿ ಸಂದರ್ಶನದಲ್ಲಿ ಹೆಸರೇಳದೆ ಪರೋಕ್ಷವಾಗಿ ಹೇಳಿದ್ದರು. ಅಂದಹಾಗೆ ಆ ನಿರ್ದೇಶಕ ಬೇರೆ ಯಾರೂ ಅಲ್ಲ ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್​.

Andrea Jeremiah

7ಜಿ ರೈನ್​ಬೋ ಕಾಲನಿ, ಯಾರಡಿ ನೀ ಮೋಹಿನಿ, ಆಯಿರಥಿಲ್​ ಒರುವನ್​, ಎನ್​ಜಿಕೆ ಮತ್ತು ನಾನೇ ವರುವನ್​ ಸೇರಿದಂತೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೆ, ವಿಜಯ್​ ಅಭಿನಯದ ಬೀಸ್ಟ್​ ಹಾಗೂ ವಿಶಾಲ್​ ನಟನೆಯ ಮಾರ್ಕ್​ ಆಂಟೋನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಪ್ರತಿಭೆಯಿಂದಲೇ ತಮಿಳು ಇಂಡಸ್ಟ್ರಿಯಲ್ಲಿ ಸೆಲ್ವರಾಘವನ್​ ಹೆಸರು ಮಾಡಿದ್ದಾರೆ. 2006ರಲ್ಲಿ ನಟಿ ಸೋನಿಯಾ ಅಗರವಾಲ್​ ಅವರನ್ನು ಮದುವೆಯಾಗಿದ್ದರು. ಆದರೆ, 2010ರಲ್ಲಿ ಇಬ್ಬರು ಡಿವೋರ್ಸ್​ ಪಡೆದುಕೊಂಡರು. 2011ರಲ್ಲಿ ಗೀತಾಂಜಲಿ ಎಂಬುವರನ್ನು ಮದುವೆಯಾದರು.

ಸೆಲ್ವರಾಘವನ್​ ನಿರ್ದೇಶನದ ಆಯಿರಥಿಲ್​ ಒರುವನ್​ ಚಿತ್ರದಲ್ಲಿ ಆಂಡ್ರಿಯಾ ಜೆರಮಿಯಾ ಸಹ ನಟಿಸಿದ್ದಾರೆ. ಸೆಲ್ವರಾಘವನ್​ ಜತೆಗಿನ ಸಂಬಂಧದ ಬಗ್ಗೆ ಈ ಹಿಂದೆಯೇ ಸಾಕಷ್ಟು ಸುದ್ದಿಗಳು ಹರಿದಾಡಿದರೂ ಸಹ ಅದು ವದಂತಿಯಾಗಿಯೇ ಉಳಿದಿತ್ತು. ಆದರೆ, ಯಾವಾಗ ಆಂಡ್ರಿಯಾ ಅವರು “ಬ್ರೋಕನ್​ ವಿಂಗ್ಸ್​” ಹೆಸರಿನಲ್ಲಿ ಪುಸ್ತಕ ಬರೆದು, ಅದರಲ್ಲಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರೋ ಆಗ ವದಂತಿಗಳೆಲ್ಲ ನಿಜವಾಯಿತು.

ವಿವಾಹಿತ ವ್ಯಕ್ತಿಯ ಜತೆ ದೀರ್ಘಕಾಲದವರೆಗೆ ಅಫೇರ್​ ಇಟ್ಟುಕೊಂಡಿದ್ದೆ. ಆತನಂದ್ರೆ ನನಗೆ ತುಂಬಾ ಇಷ್ಟ ಇತ್ತು. ಆದರೆ, ಆತ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದನು. ಇದು ನನ್ನನ್ನು ಖಿನ್ನತೆಗೆ ದೂಡಿತು. ಈ ಸಂಕಷ್ಟದಿಂದ ಹೊರಬರಲು ನಾನು ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಯಿತು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಆಂಡ್ರಿಯಾ ಹೇಳಿಕೊಂಡಿದ್ದರು. ಇದು ಕಾಲಿವುಡ್​ನಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ಆಂಡ್ರಿಯಾ​ ಜತೆಗಿನ ಅಫೇರ್​ ಕಾರಣದಿಂದಲೇ ಸೋನಿಯಾ ಅಗರ್ವಾಲ್,​ ಸೆಲ್ವರಾಘವನ್​ನಿಂದ ಡಿವೋರ್ಸ್​ ಪಡೆದುಕೊಂಡರು ಎಂದು ಹೇಳಲಾಗಿದೆ. ಸೆಲ್ವರಾಘವನ್​ನಿಂದ ದೂರಾದ ಬಳಿಕ ಆಂಡ್ರಿಯಾ, ಸಂಗೀತ ನಿರ್ದೇಶಕ ಅನಿರುದ್ಧ್​ ಜತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ, ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಸೆಲ್ವರಾಘವನ್​, ಗೀತಾಂಜಲಿ ಎಂಬುವರನ್ನು ವರಿಸಿದ್ದಾರೆ.

Anirudh, Andrea jeremiah

ಅಂದಹಾಗೆ, ಆಂಡ್ರಿಯಾ ಜೆರೆಮಿಯಾ ಪ್ಲೇಬ್ಯಾಕ್ ಸಿಂಗರ್ ಮತ್ತು ಸಂಗೀತಗಾರ್ತಿಯಾಗಿ ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. 1985ರ ಡಿಸೆಂಬರ್ 21ರಂದು ತಮಿಳುನಾಡಿನ ಅರಕ್ಕೊನಂನಲ್ಲಿ ಆಂಗ್ಲೋ-ಇಂಡಿಯನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ ಆಂಡ್ರಿಯಾ, ಚೆನ್ನೈಯಲ್ಲಿ ಬೆಳೆದರು. ತಂದೆ ವಕೀಲರಾಗಿದ್ದರು. ತಾಯಿ ಮೇರಿ ಜೆರೆಮಿಯಾ ಗೃಹಿಣಿ. ಶಾಲಾ ದಿನಗಳಲ್ಲಿ ಪಿಯಾನೋ ವಾದ್ಯವನ್ನು ಕಲಿತು, 10ನೇ ವಯಸ್ಸಿನಿಂದಲೇ 'ಯಂಗ್ ಸ್ಟಾರ್ಸ್' ಎಂಬ ಜ್ಯಾಕ್ಸನ್ ಫೈವ್ ಶೈಲಿಯ ತಂಡದಲ್ಲಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಸಂಗೀತದ ಮೇಲೆ ಗಮನ ಹರಿಸಿ, ಹ್ಯಾರಿಸ್ ಜಯರಾಜ್ ಅವರೊಂದಿಗೆ 'ಅನ್ನಿಯನ್' ಸಿನಿಮಾದ 'ಕನ್ನುಂ ಕನ್ನುಂ ನೋಕಿಯಾ' ಎಂಬ ಹಾಡಿನ ಮೂಲಕ ಪ್ಲೇಬ್ಯಾಕ್ ಸಿಂಗರ್ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದರು.

2007ರಲ್ಲಿ ಗೌತಮ್ ವಾಸುದೇವ್ ಮೇನನ್ ಅವರ 'ಪಚೈಕಿಲಿ ಮುತ್ತುಚಾರಂ' ಚಿತ್ರದೊಂದಿಗೆ ನಟಿ ಆದರು. ಇದರಲ್ಲಿ ಜ್ಯೋತಿಕಾ ಮತ್ತು ಶರತ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರು. ಮಲಯಾಳ ಚಿತ್ರರಂಗಕ್ಕೆ 'ಅನ್ನಯುಂ ರಸೂಲುಂ' (2013) ಮೂಲಕ ಪ್ರವೇಶಿಸಿ, ಫಹದ್ ಫಾಸಿಲ್ ಅವರೊಂದಿಗೆ ನಟಿಸಿ ವ್ಯಾಪಕ ಗೌರವ ಪಡೆದರು. 'ವಿಶ್ವರೂಪಂ', 'ತಾರಮಣಿ', 'ಲೋಹಂ', 'ಮಾಸ್ಟರ್' ಮುಂತಾದ ಯಶಸ್ವಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. ಸಂಗೀತದಲ್ಲಿ ಯುವನ್ ಶಂಕರ್ ರಾಜಾ, ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಹಾಡುಗಳನ್ನು ಹಾಡಿರುವ ಆಂಡ್ರಿಯಾ, 'ಥೆ ಜೆರೆಮಿಯಾ ಪ್ರಾಜೆಕ್ಟ್' ಎಂಬ ಆಲ್ಬಮ್ ಬಿಡುಗಡೆ ಮಾಡಿದ್ದಾರೆ. 202ರಲ್ಲಿ 'ಬ್ರೋಕನ್ ವಿಂಗ್' ಎಂಬ ಕವನಗಳ ಸಂಕಲನವನ್ನು ಪ್ರಕಟಿಸಿ, ತಮ್ಮ ಕುರಿತಾದ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net