ಭಾರತದಲ್ಲಿನ ಈ ಫುಡ್​​ ಅಂದ್ರೆ ಬಹಳ ಇಷ್ಟ; WWE ಚಾಂಪಿಯನ್​​​ ಜಾನ್​ ಸೀನಾ

Untitled-design-37
Published on

ಮುಂಬೈ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್​ ಅಂಬಾನಿ ಅವರು ರಾಧಿಕಾ ಮರ್ಚೆಂಟ್​ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಾಗತಿಕ ಐಕಾನ್​​, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್​ ಸೆಲಿಬ್ರಿಟಿಗಳು ಭಾಗಿಯಾಗಿದ್ದು ಗೊತ್ತೆ ಇದೆ. ಈ ಸಮಾರಂಭದಲ್ಲಿ 16 ಬಾರಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಚಾಂಪಿಯನ್, ಹಾಲಿವುಡ್ ನಟ ಜಾನ್ ಸೀನಾ ಅವರು ಸಾಂಪ್ರದಾಯಿಕ ಶೇರ್ವಾನಿ ಧರಿಸಿ ಮಿಂಚಿದ್ದರು.

ಅಂಬಾನಿ ಅವರ ಮದುವೆಯಲ್ಲಿನ ಭಾರತೀಯ ಸಂಪ್ರದಾಯಗಳನ್ನು ಮತ್ತು ಸ್ಥಳೀಯ ಆಹಾರವನ್ನು ಹಾಲಿವುಡ್ ನಟ ಜಾನ್ ಸೀನಾ ಮೆಚ್ಚಿಕೊಂಡಿದ್ದಾರೆ. ಭಾರತೀಯ ಮಸಾಲೆಯುಕ್ತ ಆಹಾರದ ರುಚಿಯನ್ನು ಜಾನ್​​ ಸೀನಾ ಇನ್ನೂ ಮರೆತಿಲ್ಲ. ಭಾರತೀಯ ಆಹಾರವನ್ನು ಸಾಕಷ್ಟು ಹೊಗಳಿದ್ದಾರೆ.

ಅಂಬಾನಿ ಅವರ ಮದುವೆಯಲ್ಲಿ ಹಲವು ಬಗೆಯ ಖಾದ್ಯಗಳಿದ್ದವು. ಭಾರತೀಯ ಆಹಾರ ಮತ್ತು ಸ್ಟ್ರೀಟ್​​ ಆಹಾರವನ್ನು ಉತ್ತಮವಾಗಿ ಬಡಿಸಿದರು. ಬಹಳ ರುಚಿಕರವಾಗಿತ್ತು ಹಾಗೂ ಇಷ್ಟವಾಯಿತು. ನಾನು ಬಹಳ ಕಡಿಮೆ ಸಮಯದವರೆಗೂ ಮಾತ್ರ ಅಲ್ಲಿ ಇದ್ದೆ. ಆದರೆ ಇನ್ನು ಭಾರತೀಯ ಮಸಾಲೆಯುಕ್ತ ಆಹಾರ ಹಾಗಾ ಸ್ಟ್ರೀಟ್ ಫುಡ್​​​​​ ತಿನ್ನುವತ್ತ ಗಮನ ಹರಿಸಬೇಕಾಗಿದೆ ಎಂದು ಜಾನ್ ಸೀನಾ ತಿಳಿಸಿದರು.

ನಾನು ಬಹಳ ಕಡಿಮೆ ಸಮಯ ಅಲ್ಲಿ ಇದ್ದಿದ್ದರಿಂದ ಲಭ್ಯವಿರುವ ಎಲ್ಲವನ್ನೂ ಪ್ರಯತ್ನಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲು ಎದುರುನೋಡುತ್ತಿದ್ದೇನೆ ಮತ್ತು ಇತರ ಭಾರತೀಯ ಆಹಾರವನ್ನು ತಿನ್ನಲು ಇಷ್ಟಪಡುತ್ತೇನೆ ಎಂದು ಹೇಳಿದರು. ಅಂಬಾನಿ ಅವರ ಮದುವೆ ಸಮಾರಂಭದಲ್ಲಿ ಹಲವಾರು ಅತಿಥಿಗಳೊಂದಿಗೆ ಜಾನ್ ಸೀನಾ ಅವರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ಡಬ್ಲ್ಯುಡಬ್ಲ್ಯುಇಯ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಜಾನ್​ ಸೀನಾ ಅವರು ಈ ತಿಂಗಳ ಆರಂಭದಲ್ಲಿ ತನ್ನ ನಿವೃತ್ತಿಯ ಬಗ್ಗೆ ಘೋಷಿಸಿದರು. 2025 ರ ಎಲಿಮಿನೇಷನ್ ಚೇಂಬರ್ ಮತ್ತು ರೆಸಲ್‌ಮೇನಿಯಾ 41 ಅವರ ಕೊನೆಯ ಪ್ರೀಮಿಯಂ ಲೈವ್ ಈವೆಂಟ್​​ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net