ಸಾಧಿಸುವ ಛಲವಿದ್ದರೆ ಯಶಸ್ಸು ಖಚಿತ

Bel_Excel Parba
Published on

ಬೆಳ್ತಂಗಡಿ: ಜೀವನದಲ್ಲಿ ಸೋಲಿಗೆ ಭಯಪಡಬಾರದು, ಬದಲಾಗಿ ಸಾಧನೆಗೆ ಮುಂದಾಗಬೇಕು. ಆಗ ದೇವರ ಅನುಗ್ರಹದ ಮತ್ತು ಯಶಸ್ಸು ಕಟ್ಟಿಟ್ಟ ಬುತ್ತಿ. ಎಕ್ಸೆಲ್ ಕಾಲೇಜಿನ ಅಧ್ಯಕ್ಷರು ಕೂಡ ಕಠಿನ ಶ್ರಮದಿಂದ ಯಶಸ್ಸು ಕಂಡಿದ್ದಾರೆ, ಎಕ್ಸೆಲ್ ಕಾಲೇಜು ರಾಷ್ಟಮಟ್ಟದಲ್ಲಿ ಬೆಳೆಯಲಿ ಎಂದು ಕನ್ಯಾಡಿ ಸೇವಾಭಾರತಿಯ ಅಧ್ಯಕ್ಷ ವಿನಾಯಕ ರಾವ್ ಹೇಳಿದರು.

ಶನಿವಾರ ಎಕ್ಸೆಲ್ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಮತ್ತು ಅರಮಲೆಬೆಟ್ಟ ಕ್ಯಾಂಪಸ್‌ನಲ್ಲಿ ಎಕ್ಸೆಲ್ ಪರ್ಬ 2024ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ಅರಮಲೆಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ಮಾತನಾಡಿ, ಎಕ್ಸೆಲ್ ಕಾಲೇಜು ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇದಕ್ಕೆ ಇಲ್ಲಿನ ಶಿಕ್ಷಣದ ಗುಣಮಟ್ಟದ ಸಾಕ್ಷಿ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಸಂಸ್ಥೆ ಮುಂದೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜ್ ಆಗಿ ಬೆಳೆಯಲಿ ಎಂದರು.

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಂಡಾಜೆ ಕ್ರಿಸ್ತ್ ಅಕಾಡೆಮಿಯ ಅಧ್ಯಕ್ಷ ಪಾ.ಮ್ಯಾಥ್ಯೂ, ಬೆಳ್ತಂಗಡಿ ಠಾಣಾಧಿಕಾರಿ ಮುರಳೀಧರ ನಾಯ್ಕ , ಆಂತರಿಕ ಲೆಕ್ಕಪರಿಶೋಧಕ ಆಕಾಶ್ ದೀಪ್ ಮೂಡುಬಿದಿರೆ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೆಬಾಸ್ಟಿಯನ್, ಕಾಲೇಜಿನ ಗೌರಾವಾಧ್ಯಕ್ಷ ಸತೀಶ್ ಕುಮಾರ್ ಅರಿಗ ಬೊಳ್ಳೂರು ಗುತ್ತು, ಹಳೇ ವಿದ್ಯಾರ್ಥಿ ಪ್ರಜ್ವಲ್ ಎಚ್.ಎನ್, ಕಾಲೇಜಿನ ಕಾರ್ಯದರ್ಶಿ ಅಭಿರಾಮ್ ಬಿ.ಎಸ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಪ್ರಜ್ವಲ್ ಸ್ವಾಗತಿಸಿ, ಪ್ರಾಂಶುಪಾಲ ಡಾ.ನವೀನ್‌ಕುಮಾರ್ ಮರಿಕೆ ವಂದಿಸಿದರು. ಉಪನ್ಯಾಸಕ ಪ್ರದೀಕ್ ರೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net