ನಿಮ್ಮ ಬಳಿ 1 ರೂಪಾಯಿ ನೋಟಿದೆಯಾ? ಹಾಗಿದ್ರೆ ಲಕ್ಷ ಲಕ್ಷ ಸಿಗಬಹುದು ಇಲ್ನೋಡಿ..!

one Rupee
Published on

ನವದೆಹಲಿ: ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರು ಸಹ ತಮ್ಮ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ತುಂಬಾ ಶ್ರಮಿಸುತ್ತಾರೆ. ಕೆಲವರು ಸಾಕಷ್ಟು ಶ್ರಮಪಡದಿದ್ದರೂ ಸಹ ಅದೃಷ್ಟ ಬಲದಿಂದ ಭಾರಿ ಹಣಗಳಿಸುವ ಉದಾಹರಣೆಗಳನ್ನು ನೋಡಿದ್ದೇವೆ. ಇನ್ನು ಕೆಲವರು ಎಷ್ಟೇ ಶ್ರಮಪಟ್ಟರು ಕುಟುಂಬದ ಅವಶ್ಯಕತೆ ಪೂರೈಸಲು ಹೆಣಗಾಡುತ್ತಾರೆ.

ಇನ್ನು ಮನೆಗಳಲ್ಲಿ ಇರುವ ಹಳೆಯ ವಸ್ತುಗಳೇ ಒಮ್ಮೊಮ್ಮೆ ನಮ್ಮ ಅದೃಷ್ಟವನ್ನು ಬಲಾಯಿಸುತ್ತವೆ. ಕೆಲಸಕ್ಕೆ ಬರುವುದಿಲ್ಲ ಎಂದು ಸುಮ್ಮನ್ನೆ ಇಟ್ಟಂತಹ ವಸ್ತುಗಳ ಸಹ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತವೆ. ಅಂಥದ್ದೆ ಒಂದು ವಸ್ತುವಿನ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಅಂದಹಾಗೆ ನಾವಿಂದು ಹೇಳ ಹೊರಟಿರುವುದು ಒಂದು ರೂಪಾಯಿ ನೋಟಿನ ಬಗ್ಗೆ. ಬಹುತೇಕರ ಬಳಿ ಒಂದು ರೂಪಾಯಿ ನೋಟು ಇರಬಹುದು. ಚಲಾವಣೆಯಲ್ಲಿ ಇರದಿದ್ದರೂ ಅದನ್ನು ಮಾರಿ ಇಂದು ಲಕ್ಷಾಂತರ ರೂ. ಪಡೆಯಬಹುದಾಗಿದೆ.

ನೀವು ಮೇಲಿನ ಚಿತ್ರದಲ್ಲಿ ನೋಡುತ್ತಿರುವ ಒಂದು ರೂಪಾಯಿ ನೋಟಿನ ಮೇಲೆ 786 ಸಂಖ್ಯೆ ಬರೆದಿರುವುದನ್ನು ಗಮನಿಸಬಹುದು. ಈ ನಂಬರ್​ ಮುಸ್ಲಿಂರಿಗೆ ತುಂಬಾ ವಿಶೇಷವಾದದ್ದು, ಅನೇಕ ಮಂದಿ ಈ ನಂಬರಿನ ನೋಟನ್ನು ಕೊಂಡುಕೊಳ್ಳಲು ಸಿದ್ಧರಿದ್ದಾರೆ. ಏಕೆಂದರೆ ಇಂತಹ ನೋಟಗಳನ್ನು ಸಂಗ್ರಹಿಸುವುದು ಅವರಿಗೆ ತುಂಬಾ ಇಷ್ಟ ಕೂಡ ಹೌದು. ಹೀಗಾಗಿ ನಿಮ್ಮ ಬಳಿ ಇಂತಹ ನೋಟುಗಳಿದ್ದರೆ, ಅದನ್ನು ನೀಡಿ ಲಕ್ಷಾಂತರ ರೂಪಾಯಿ ಪಡೆದುಕೊಳ್ಳಬಹುದು.

ನಿಮ್ಮ ಬಳಿಕ ಇಂಥದ್ದೆ ನೋಟು ಇದ್ದರೆ ಅದನ್ನು ಆನ್​ಲೈನ್​ನಲ್ಲಿ ಪೋಸ್ಟ್​ ಮಾಡಿ ಹಣ ಪಡೆಯಬಹುದು. ಇದಕ್ಕಾಗಿಯೇ ಕೆಲವು ವೆಬ್​ಸೈಟ್​ಗಳಿವೆ. ಅಲ್ಲಿ ನಿಮ್ಮ ನೋಟನ್ನು ಪೋಸ್ಟ್​ ಮಾಡಿ ಹರಾಜು ಹಾಕಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net