ತಮಿಳುನಾಡು: ನಿನ್ನೆ (ಸೆ.19) ಚೆನ್ನೈನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಬಹುಬೇಗನೆ ನಾಲ್ಕು ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡು ಬಾಂಗ್ಲಾ ವಿರುದ್ಧ ಅಬ್ಬರಿಸಲು ಹೆಣಗಾಡಿತು. ಆರಂಭಿಕ ಹಂತದಲ್ಲೇ ತಂಡದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್ ಹಾಗೂ ರಿಷಬ್ ಪಂತ್ ಬಾಂಗ್ಲಾದೇಶ ವೇಗಿಗಳಿಗೆ ತಮ್ಮ ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಮುಖಮಾಡಿದರು. ಇನ್ನು ಈ ವೇಳೆ ಬ್ಯಾಟಿಂಗ್ ಆರ್ಡರ್ ಬದಲಿಸಿದ ಮ್ಯಾನೇಜ್ಮೆಂಟ್ ರಾಹುಲ್ ಬದಲಿಗೆ ಪಂತ್ರನ್ನು ಕಣಕ್ಕಿಳಿಸಿತು. ಇದು ಹಲವರಲ್ಲಿ ಗೊಂದಲ ಮೂಡಿಸಿತು. ರಾಹುಲ್ ಬರಬೇಕಿದ್ದ ಜಾಗದಲ್ಲಿ ಪಂತ್ರನ್ನು ಕ್ರೀಸ್ಗೆ ಕಳಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಹಲವರಲ್ಲಿ ಕಾಡತೊಡಗಿತು. ಸದ್ಯ ಇದೇ ವಿಚಾರಕ್ಕೆ ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ಗಂಭೀರ್ ವಿರುದ್ಧ ಭಾರೀ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಹಿರಿಯ ಆಟಗಾರ ಅಜಯ್ ಜಡೇಜಾ, ಮುಂಬರುವ ಟೆಸ್ಟ್ ಪಂದ್ಯಗಳಿಂದ ರಾಹುಲ್ರನ್ನು ಕೈಬಿಡಿ ಎಂದಿದ್ದಾರೆ.
ಇದನ್ನೂ ಓದಿ: ನವೆಂಬರ್ನಲ್ಲಿ ವಿದೇಶಿ ನೆಲದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಯೋಜನೆ?
“ರಾಹುಲ್ ಸ್ಥಾನಕ್ಕೆ ಪಂತ್ರನ್ನು ಕಣಕ್ಕಿಳಿಸಿದ ರೋಹಿತ್ ಮತ್ತು ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್, ಕೆ.ಎಲ್. ರಾಹುಲ್ರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಸರಿಯಿಲ್ಲ. ತಂಡದ ಒಬ್ಬ ಪ್ರಮುಖ ಆಟಗಾರನನ್ನು ಹೀಗಾ ನಡೆಸಿಕೊಳ್ಳೋದು? 5ನೇ ಕ್ರಮಾಂಕದಲ್ಲಿ ಬರಬೇಕಿದ್ದ ರಾಹುಲ್ರನ್ನು ಅಲ್ಲೇ ಕೂರಿಸಿ ರಿಷಬ್ ಪಂತ್ರನ್ನು ಆಡಲು ಕಳಿಸಿದ್ದೀರಾ. ಪದೇ ಪದೇ ಕೆ.ಎಲ್ಗೆ ಹೀಗೆ ಮಾಡೋದು ಒಪ್ಪುವಂತದ್ದಲ್ಲ. ಆತ ಒಬ್ಬ ಕ್ಲಾಸ್ ಪ್ಲೇಯರ್. ಈ ಹಿಂದಿನ ಸಾಕಷ್ಟು ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದರು.
“ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿದ್ದ ರಾಹುಲ್ರನ್ನು ಕೂರಿಸಿ ರಿಷಬ್ ಪಂತ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡುವ ಮೂಲಕ ನೀವು ಅವರಿಗೆ ಪ್ರಾಮುಖ್ಯತೆ ನೀಡುತ್ತಿದ್ದೀರಿ ನಿಜ. ಆದರೆ ನೀವು ಅವರ ವಿಶ್ವಾಸದೊಂದಿಗೆ ಆಟವಾಡುತ್ತಿದ್ದೀರಿ ಎಂಬುದು ಗಮನದಲ್ಲಿರಲಿ. ಬ್ಯಾಟಿಂಗ್ ಕ್ರಮಾಂಕದಲ್ಲಿ ರಾಹುಲ್ರನ್ನು ಕೆಳಗಿಳಿಸಲು ಬಯಸಿದರೆ, ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಅವರನ್ನು ಆಡಿಸಲೇ ಬೇಡಿ. ಈ ರೀತಿ ಆಗುವುದಾದರೆ ರಾಹುಲ್ ಟೆಸ್ಟ್ಗಳಲ್ಲಿ ಆಡದಿರುವುದೇ ಉತ್ತಮ” ಎಂದು ಅಜಯ್ ತಮ್ಮ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ತುಂಬಾ ಕಷ್ಟಪಟ್ಟು ಓದಿ ಪಡೆದ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಇಬ್ಬರು ಅಧಿಕಾರಿಗಳು!
80 ಓವರ್ಗಳನ್ನು ಎದುರಿಸಿದ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಲು ಶಕ್ತವಾಯಿತು. ಆರಂಭಿಕ ಹಂತದಲ್ಲೇ ತಂಡದ 6 ವಿಕೆಟ್ಗಳು ಹೋಗಿದ್ದು ಭಾರತಕ್ಕೆ ದೊಡ್ಡ ಆಘಾತವನ್ನೇ ತಂದೊಡ್ಡಿತು. ಆದ್ರೆ, ಅಂತಿಮವಾಗಿ ಕ್ರೀಸ್ಗೆ ಅಂಟಿಕೊಂಡ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಜತೆಯಾಟ ತಂಡದ ಒಟ್ಟು ಮೊತ್ತವನ್ನು 300ರ ಗಡಿದಾಟಿಸಿತು. ಜಡೇಜಾ 86 ರನ್ ಸಿಡಿಸಿದರೆ, ಅಶ್ವಿನ್ ಆಕರ್ಷಕ ಶತಕ (102*) ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು,(ಏಜೆನ್ಸೀಸ್).
57ನೇ ವಯಸ್ಸಿಗೆ ಮತ್ತೆ ಮದುವೆ! ವಿಲನ್ ಪಾತ್ರಗಳಿಂದಲೇ ಸಖತ್ ಸದ್ದು ಮಾಡಿದ ಈ ನಟ ಯಾರು ಗೊತ್ತೇ?