ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ಇದಲ್ಲದೆ, ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈರುಳ್ಳಿಯು ನಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ಶಕ್ತಿ ಹೊಂದಿದೆ. ಇಷ್ಟೇ ಅಲ್ಲದೆ, ಚರ್ಮದ ಸೌಂದರ್ಯ ಮತ್ತು ಕೂದಲ ಆರೈಕೆಗೂ ತುಂಬಾ ಉಪಯುಕ್ತವಾಗಿದೆ.
ಈರುಳ್ಳಿ ಖರೀದಿಸುವಾಗ ಅದು ಕೊಳೆತಿದೆಯೋ? ಅಥವಾ ಇಲ್ಲವೋ? ಎಂಬುದನ್ನು ಮೊದಲು ಪರಿಶೀಲಿಸುತ್ತೀರಿ. ಕೆಲವೊಮ್ಮೆ ಈರುಳ್ಳಿ ಖರೀದಿ ಮಾಡಿದಾಗ ಅದರ ಒಳಗೆ ಅಂದರೆ ಸಿಪ್ಪೆಯ ಒಳಗೆ ಕಪ್ಪು ಕಲೆಯನ್ನು ನೋಡಿರುತ್ತೀರಿ. ಅಡುಗೆ ಮಾಡುವಾಗ ಆ ಕಲೆಯನ್ನು ಸ್ವಚ್ಛಗೊಳಿಸಿ, ಬಳಸುತ್ತೇವೆ. ಇನ್ನು ಕೆಲವರೂ ಸ್ವಚ್ಛಗೊಳಿಸುವುದೇ ಇಲ್ಲ. ಅಲ್ಲದೆ, ಈರುಳ್ಳಿಯಲ್ಲಿ ಯಾಕೆ ಕಪ್ಪು ಕಲೆ ಇದೆ? ಯಾವುದಾದರೂ ಸೋಂಕು ತುಗುಲಿದೆಯೇ? ಇಂತಹ ಈರುಳ್ಳಿಯನ್ನು ಬಳಸಬಹುದೇ? ಎಂಬುದರ ಬಗ್ಗೆ ಸಾಮಾನ್ಯವಾಗಿ ಯೋಚನೆ ಸಹ ಮಾಡುವುದಿಲ್ಲ. ಆದರೆ, ಈ ಬಗ್ಗೆ ತಜ್ಞರು ಹೇಳಿದ ಉಪಯುಕ್ತ ಮಾಹಿತಿ ಇಲ್ಲಿದೆ.
ಈರುಳ್ಳಿ ಸಿಪ್ಪೆ ತೆಗೆಯುವಾಗ ಕಪ್ಪು ಕಲೆ ಇದ್ದರೆ ಅಂತಹ ಈರುಳ್ಳಿಯನ್ನು ತಿನ್ನುವುದರಿಂದ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ ಕಾಯಿಲೆ) ಕಾಯಿಲೆ ಬರಬಹುದೇ? ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಕಲೆಯನ್ನು ಆಸ್ಪರ್ಜಿಲ್ಲಸ್ ನೈಗರ್ ಎಂದು ಕರೆಯುತ್ತಾರೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಅಲ್ಲಿಂದ ಈರುಳ್ಳಿಗೂ ಹೋಗುತ್ತದೆ. ಈ ಕಪ್ಪು ಕಲೆ ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಕಲೆ ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.
ಇದು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಕಲೆಯುಳ್ಳ ಈರುಳ್ಳಿಯಿಂದ ದೂರವಿರುವುದು ಉತ್ತಮ ಎನ್ನುತ್ತಾರೆ. ಅಸ್ತಮಾದಿಂದ ಬಳಲುತ್ತಿರುವವರು ಕೂಡ ಇದರಿಂದ ದೂರವಿರಲು ಸೂಚಿಸಲಾಗುತ್ತದೆ.
ಇನ್ನು ಬಳಸುವಾಗ ಕಪ್ಪು ಕಲೆ ಇರುವ ಪದರವನ್ನು ತೆಗೆದುಹಾಕಿ, ಉಳಿದಿದ್ದನ್ನು ಬಳಸಿ. ಆದರೆ ನೀವು ಬಳಸುವ ಈರುಳ್ಳಿ ಪದರದ ಮೇಲೆ ಕಪ್ಪು ಕಲೆ ಹರಡದಂತೆ ಎಚ್ಚರವಹಿಸಿ. ಒಂದು ವೇಳೆ ನೀವು ಫ್ರಿಜ್‌ನಲ್ಲಿ ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದರೆ, ನೀವು ಈ ಕಪ್ಪು ಕಲೆಗಳನ್ನು ತೆಗೆದುಹಾಕಬೇಕು. ಹಾಗೆ ಬಿಟ್ಟರೆ ಇತರ ಆಹಾರ ಪದಾರ್ಥಗಳೊಂದಿಗೆ ಬೆರೆತು ಆಹಾರ ವಿಷವಾಗುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 100 ಬಗೆಯ ಖಾದ್ಯ ತಯಾರಿಸಿ, ಉಣಬಡಿಸಿದ ಅತ್ತೆ!
ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ! ದಿನೇಶ್ ಕಾರ್ತಿಕ್ ಅಚ್ಚರಿ ಹೇಳಿಕೆ