ದೇಶದಲ್ಲಿ ನುಸುಳುಕೋರರಿದ್ದಾರೆ ಅಂದ್ರೆ 11 ವರ್ಷದಿಂದ ಏನ್ಮಾಡ್ತಿದ್ದೀರಿ? ಪ್ರಧಾನಿ ಮೋದಿ ತೇಜಸ್ವಿ ಯಾದವ್ ಪ್ರಶ್ನೆ| Tejashwi Yadav

Untitled design (34)
Published on

Tejashwi Yadav: ದೇಶದಲ್ಲಿ ಮತ್ತು ಬಿಹಾರದಲ್ಲಿ ನುಸುಳುಕೋರರು ಇದ್ದಾರೆ ಅಂದ್ರೆ, ಕಳೆದ 11 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನೀವು ಏನು ಮಾಡ್ತಿದ್ದೀರಿ?, ಅಲ್ಲದೇ ಕಳೆದ 20 ವರ್ಷಗಳಿಂದ ಬಿಹಾರದಲ್ಲೀ ಆಡಳಿತ ಮಾಡ್ತಿದ್ದೀರಿ ಎಂದು ಮಂಗಳವಾರ(ಸೆ. 16) ಪ್ರಧಾನಿ ಮೋದಿಯನ್ನು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

ವಿಪಕ್ಷಗಳು ನುಸುಳುಕೋರರಿಗೆ ಸಹಾಯ ಮಾಡ್ತಿವೆ ಎಂಬ ಪ್ರಧಾನಿ ಆರೋಪಕ್ಕೆ ಪಾಟ್ನಾದಲ್ಲಿ ಮಾತಾಡಿದ ಅವರು, ಇದೊಂದು 'ದಿಕ್ಕು ತಪ್ಪಿಸುವ ತಂತ್ರ'. ಪ್ರತಿ ವಿಧಾನಸಭಾ ಚುನಾವಣೆಗೂ ಮುನ್ನ ಜಾರ್ಖಂಡ್‌ನಲ್ಲೂ ಬಿಜೆಪಿ ಇದೇ ರೀತಿಯ ತಂತ್ರಗಳನ್ನು ಬಳಸಿದೆ ಎಂದು ಹೇಳಿದರು.

ಕಳೆದ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವಾಗ ಅವರು ಇದೇ ರೀತಿ ಊಹಾಪೋಹವನ್ನು ಎಬ್ಬಿಸಿದ್ದರು ಎಂಬುದನ್ನು ಗಮನಿಸಬೇಕು. ಈಗ ಅವರು ಅದನ್ನು ಮರೆತಿದ್ದಾರೆ. ಆಡಳಿತಾರೂಢ ಎನ್‌ಡಿಎಯಲ್ಲಿ ಮೈತ್ರಿಕೂಟದ ಪಾಲುದಾರನಾಗಿರುವ ಬಿಜೆಪಿ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿನ ತನ್ನ ವೈಫಲ್ಯವನ್ನು ಮರೆಮಾಚಲು ವಿದೇಶಿ ನುಸುಳುಕೋರರ ಬಗ್ಗೆ ಆರೋಪಗಳನ್ನು ಮಾಡ್ತಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಎನ್‌ಡಿಎಯನ್ನು ಸೋಲಿಸುತ್ತದೆ. ನಾವು ಶಿಕ್ಷಣ, ಔಷಧಿಗಳು, ಉದ್ಯೋಗಗಳು, ಕುಂದುಕೊರತೆಗಳಿಗೆ ಪರಿಹಾರ ನೀಡುವ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಮಾಡಿದ್ದ ಆರೋಪವೇನು?

ಸೋಮವಾರ ಬಿಹಾರದ ಪೂರ್ಣಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ , ಕಾಂಗ್ರೆಸ್-ಆರ್‌ಜೆಡಿ ವಿದೇಶಿ ನುಸುಳುಕೋರರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.  ಬಿಹಾರ ಮತ್ತು ಪೂರ್ವ ಭಾರತದಲ್ಲಿ ನುಸುಳುಕೋರರಿಂದ ಜನಸಂಖ್ಯಾ ಬಿಕ್ಕಟ್ಟು ಉದ್ಭವಿಸಿದೆ. ಬಿಹಾರ, ಬಂಗಾಳ, ಅಸ್ಸಾಂ ಮತ್ತು ಇತರ ಹಲವು ರಾಜ್ಯಗಳಲ್ಲಿ ಜನ ತಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಎಂದಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net