

ಕೋಟ: ಪರಿಸರದ ಬಗ್ಗೆ ನಿರ್ಲಕ್ಷ್ಯ ಧೋರಣೆ ಬಿಟ್ಟು ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸಿ. ಪರಿಸರ ಉಳಿದರೆ ಮನುಕುಲ ಉಳಿದಂತೆ ಇಲ್ಲವಾದಲ್ಲಿ ಅವನತಿ ಕಟ್ಟಿಟ್ಟ ಬುತ್ತಿ. ಮನೆ ಮನೆಯಲ್ಲೂ ಪರಿಸರ ಉಳಿವಿಗಾಗಿ ಶ್ರಮಿಸಿ ಎಂದು ಬ್ರಹ್ಮಾವರ ವಲಯ ಅರಣ್ಯ ಇಲಾಖೆ ಅಧಿಕಾರಿ ವಾಲ್ತೇಶ್ ಅಳಲಗಿರಿ ಕರೆ ನೀಡಿದರು.
ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ವಾಲೀಕರು, ಸಾಸ್ತಾನ ಇವರ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ವಾತನಾಡಿದರು.
ಸಾಸ್ತಾನ ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ವಾಲೀಕ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ತಾಪಂ ವಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್ ಗಿಡ ಹಸ್ತಾಂತರಿಸಿದರು.
ಐರೋಡಿ ಗ್ರಾಪಂ ವಾಜಿ ಅಧ್ಯಕ್ಷ ಮೋಸೆಸ್ ರೋಡ್ರಿಗಸ್, ಗೋಳಿಗರಡಿ ಕ್ಷೇತ್ರದ ಪಾತ್ರಿ ಗಳು ಶಂಕರ್ ಪೂಜಾರಿ, ಶಂಕರ್ ಕುಲಾಲ್, ಹಾಗೂ ಅನ್ಯನ್ಯತಾ ಸಂ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ಸೂರ್ಯ ಪೂಜಾರಿ, ಕಾರ್ಯದರ್ಶಿ ಅನಿಲ್ ಹಾಂಡ, ಗೋಪಾಲ ಐರೋಡಿ, ಸುರೇಶ್ ಪೂಜಾರಿ ಗುಂಡ್ಮಿ, ಟೂರಿಸ್ಟ್ ಅಧ್ಯಕ್ಷ ರಾವೇಂದ್ರ ಓಣಿ ಮನೆ, ಹಾಗೂ ಅನ್ಯೋನ್ಯತ ಗೂಡ್ಸ್ ವಾಹನ ಚಾಲಕರ ಸಂದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉದಯ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.