ಪಂಜಾಬ್​ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರುತ್ತಿದ್ದರು: ಅಮೃತ್​ಪಾಲ್​ ಸಿಂಗ್​

FotoJet (5)
Published on

ಪಂಜಾಬ್​: ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ​ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಪೊಲೀಸರು ಹಾಗೂ ಸರ್ಕಾರದ ವಿರುದ್ದ ಸರಣಿ ಆರೋಪಗಳನ್ನು ಮಾಡಲಾಗಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ಕಪ್ಪು ಪೇಟ-ಶಾಲನ್ನು ಧರಿಸಿರುವ ಅಮೃತ್​ಪಾಲ್​ ಪಂಜಾಬ್​ ಸರ್ಕಾರಕ್ಕೆ ತನ್ನನ್ನು ಬಂಧಿಸುವ ಉದ್ಧೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗಲು ಸಿದ್ದನಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ತನ್ನನ್ನು ಬಂಧಿಸಲು ಇಲ್ಲಿಯವರೆಗೂ ಸಾವಿರಾರು ಪೊಲೀಸರು ಬಂದಿದ್ಧಾರೆ. ಆದರೆ, ಅವರೆಲ್ಲರಿಂದಲ್ಲೂ ಆ ಭಗವಂತ ನನ್ನನ್ನು ಕಾಪಾಡಿದ ಮತ್ತು ತಮ್ಮ ಸಿಖ್​ ಸಮುದಾಯದವರನ್ನು ಬಂಧಿಸಿ ಹಿಂಸೆ ನೀಡಿರುವ ಪಂಜಾಬ್​ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನ ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹಿನ್ನಲೆ ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್​ಪಾಲ್​ ಸಿಂಗ್​ ಪೊಲೀಸರಿಗೆ ಶರಣಾಗಬಹುದು ಎಂದು ಹೇಳಲಾಗಿದೆ.

ಅಮೃತ್​ಪಾಲ್​ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅಮೃತಸರ್​​ ಪೊಲೀಸ್​ ಕಮಿಷನರ್​ ನೌನಿಹಾಲ್​ ಸಿಂಗ್​ ಅಮೃತ್​ಪಾಲ್​ ಸಿಂಗ್​ ಗೋಲ್ಡನ್​ ಟೆಂಪಲ್​ನಲ್ಲಿ ಶರಣಾಗುವ ಸಾದ್ಯತೆ ಇದೆ. ಕಾನೂನು-ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು ಎಂದು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net