ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈಗ ಬಿರುಸಿನ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ಏಷ್ಯಾಕಪ್ ಬಳಿಕ ವಿಶ್ವಕಪ್‌ನಲ್ಲಿಯೂ ಕೊಹ್ಲಿ ತಮ್ಮ ವಿರಾಟ ರೂಪವನ್ನು ಪ್ರದರ್ಶಿಸಿದ್ದರು. ಅದೇ ಫಾರ್ಮ್ ಅನ್ನು ಇತರ ಸರಣಿಗಳಲ್ಲಿಯೂ ಮುಂದುವರಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್-2024 ಟೂರ್ನಿಯಲ್ಲೂ ರನ್ ಮಳೆ ಹರಿಸಿದರು. ಆರ್‌ಸಿಬಿಯನ್ನು ಚಾಂಪಿಯನ್ ಮಾಡಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. 15 ಪಂದ್ಯಗಳಲ್ಲಿ 154 ಸ್ಟ್ರೈಕ್ ರೇಟ್‌ನೊಂದಿಗೆ 741 ರನ್ ಗಳಿಸಿದರು. ಇದರಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. ಕೊಹ್ಲಿ ಎಷ್ಟೇ ಪ್ರಯತ್ನಿಸಿದರೂ ಬೆಂಗಳೂರು ಪ್ಲೇಆಫ್‌ಗೆ ಮಾತ್ರ ಸೀಮಿತವಾಯಿತು. ಏಕೆಂದರೆ, ಕೊಹ್ಲಿಗೆ ಇನ್ನುಳಿದ ಆಟಗಾರರು ಸಾಥ್ ನೀಡಲಿಲ್ಲ. ಇದೀಗ ವಿರಾಟ್ ಕೊಹ್ಲಿ ಅವರ ಗಮನ ಟಿ20 ವಿಶ್ವಕಪ್ ಮೇಲಿದೆ. ಈ ಮೆಗಾ ಟೂರ್ನಮೆಂಟ್ನಲ್ಲಿ ರನ್ ಮಳೆ ಸುರಿಸುವ ಮೂಲಕ ಭಾರತವನ್ನು ವಿಜಯಿಯನ್ನಾಗಿ ಮಾಡಲು ಕೊಹ್ಲಿ ಹವಣಿಸುತ್ತಿದ್ದಾರೆ.
ಕೊಹ್ಲಿ, ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವಾಗ, ಸ್ಟಾರ್ ಆಟಗಾರ ದಿನೇಶ್ ಕಾರ್ತಿಕ್, ಕೊಹ್ಲಿ ಕುರಿತು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವಿರಾಟ್ ಅವರನ್ನು ಯಾರಾದರೂ ಪ್ರಚೋದನೆ ಮಾಡಿದರೆ ಅವರಿಗೆ ತಮ್ಮ ಬ್ಯಾಟಿಂಗ್ನಿಂದಲೇ ನರಕ ತೋರಿಸುತ್ತಾರೆ ಎಂದು ಡಿಕೆ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿಯನ್ನು ಕೆರಳಿಸಿದ್ದಕ್ಕೆ ಅವರು ಏನು ಮಾಡಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದರು.
ತನ್ನನ್ನು ಟೀಕಿಸುವವರು ಮತ್ತು ತನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡುವವರ ಬಾಯಿಯನ್ನು ಬ್ಯಾಟಿಂಗ್ನಿಂದಲೇ ಮುಚ್ಚಿಸಲು ಕೊಹ್ಲಿ ಇಷ್ಟಪಡುತ್ತಾರೆ. ಕೊಹ್ಲಿ, ಬೆಂಕಿಯ ಚೆಂಡಿನಂತೆ ಎಂದು ಡಿಕೆ ಹೇಳಿದ್ದಾರೆ. ಅಂದಹಾಗೆ ಡಿಕೆ ಈ ರೀತಿ ಹೇಳಿಕೆ ನೀಡುವುದರ ಹಿಂದೆ ಒಂದು ಕಾರಣವಿದೆ. ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ತಮ್ಮ ಬಿರುಸಿನ ಬ್ಯಾಟ್‌ನಿಂದ ದಾಖಲೆಗಳ ಸುರಿಮಳೆಗೈದರು.
ಕೊಹ್ಲಿ ರನ್‌ಗಳ ಪ್ರವಾಹದ ನಂತರವೂ, ಸುನಿಲ್ ಗವಾಸ್ಕರ್ ಅವರಂತಹ ಅನೇಕ ಮಾಜಿ ಕ್ರಿಕೆಟಿಗರು ಅವರ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದರು. ಕೊಹ್ಲಿ ನಿಧಾನವಾಗಿ ಆಡುತ್ತಿದ್ದು, ಕಪ್ ಗೆಲ್ಲುವುದು ಕಷ್ಟವಾಗಲಿದೆ ಎಂದು ಟೀಕಿಸಿದರು. ಆ ಸಮಯದಲ್ಲಿ, ಕಿಂಗ್ ಕೊಹ್ಲಿ, ಮಾತಿನ ಬದಲು ತಮ್ಮ ಬ್ಯಾಟ್‌ನಿಂದ ಪ್ರತಿಕ್ರಿಯಿಸಿದರು. ಬ್ಯಾಟಿಂಗ್ನಲ್ಲಿ ಕ್ರಮೇಣ ತಮ್ಮ ಗೇರ್ ಬದಲಾಯಿಸಿದರು ಮತ್ತು ಇನ್ನಷ್ಟು ಸ್ಫೋಟಕವಾಗಿ ಆಡಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಡಿಕೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
Dinesh Karthik said – "When someone says something about Virat Kohli, he really fuels his passion, he's like molten leva coming out and he thrives. He loves proving people wrong. He's fiery & you don't want to be anywhere close to it because you're going to get burnt for sure". pic.twitter.com/7GqetGaHFW
— Tanuj Singh (@ImTanujSingh) May 28, 2024
ಕೊಹ್ಲಿ ತುಂಬಾ ಭಾವುಕ ಆಟಗಾರ. ತನ್ನನ್ನು ಟೀಕಿಸುವವರ ಬಾಯಿ ಮುಚ್ಚಿಸಲು ಇಷ್ಟಪಡುತ್ತಾರೆ. ಈ ಐಪಿಎಲ್‌ನಲ್ಲಿ ಸೈಮನ್ ಡೌಲ್ ಅವರಂತಹ ಕೆಲವರು ಅವರನ್ನು ಕೆರಳಿಸಿದರು. ಇದರೊಂದಿಗೆ ಅವರು ಬ್ಯಾಟ್‌ನಿಂದ ಅವಾಂತರ ಸೃಷ್ಟಿಸಿದರು. ವಿರಾಟ್‌ನಲ್ಲಿರುವ ಈ ಗುಣವನ್ನು ಯಾರೂ ಸಹಿಸುವುದಿಲ್ಲ. ಈ ಬಾರಿಯ ಕ್ಯಾಶ್ ರಿಚ್ ಲೀಗ್ನಲ್ಲಿ ಅವರು ಆಡಿದ ರೀತಿಯನ್ನು ಪುಸ್ತಕ ಬರೆಯಬಹುದು ಎಂದು ಡಿಕೆ ಹೇಳಿದರು. (ಏಜೆನ್ಸೀಸ್)
ಸ್ಟಾರ್ಕ್ಗೆ 24.75 ಕೋಟಿ ನಿಮ್ಗೆ ಮಾತ್ರ 55 ಲಕ್ಷ ರೂ. ಏಕೆ? ರಿಂಕು ಕೊಟ್ಟ ಉತ್ತರಕ್ಕೆ ತಲೆಬಾಗಿತು ಕ್ರೀಡಾಜಗತ್ತು!
17 ವರ್ಷದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು: ವಿಶೇಷ ದಾಖಲೆಗೆ ಸಾಕ್ಷಿಯಾಯ್ತು ಈ ಸೀಸನ್!