More

    ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರನಾಳಿಕೆ ಜಾರಿ – ಉಸ್ತುವಾರಿ ಅರುಣಸಿಂಗ್ ಹೇಳಿಕೆ

    ವಿಜಯಪುರ : ಈ ಬಾರಿ ಬಿಜೆಪಿ 150ಕ್ಕಿಂತ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಮತ್ತೊಮ್ಮೆ ಬರಲಿದೆ ಎಂದು ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರನಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಪ್ರನಾಳಿಕೆಯ ಎಲ್ಲ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದರು.

    ಇದನ್ನೂ ಓದಿ : ನನ್ನ ನಮಸ್ಕಾರ ಮನೆ ಮನೆಗೆ ತಲುಪಿಸುವಿರಾ? – ನರೇಂದ್ರ ಮೋದಿ

    39 ಲಕ್ಷ ಮನೆಗಳಿಗೆ ನಲ್ಲಿ ನೀರು, ಬಡವರಿಗೆ ಪಿಂಚಣಿ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಉತ್ತಮ ಕೆಲಸ ಮಾಡಿವೆ. ಕರ್ನಾಟಕದಲ್ಲಿ ರಸ್ತೆ, ಮೆಟ್ರೋ, ರೇಲ್ವೆ, ಏರಪೋರ್ಟ್​ಗಳನ್ನು ನಿರ್ವಿುಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿವೆ. ಯಾರೂ ಸಹ ಕಾಂಗ್ರೆಸ್ ಬರಬೇಕು ಎಂದು ಬಯಸುತ್ತಿಲ್ಲ. ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ವರ್ಗಕ್ಕೂ ಸೌಲಭ್ಯಗಳನ್ನು ಕೊಡಲಾಗಿದೆ ಎಂದರು.

    ಕಾಂಗ್ರೆಸ್ ವಿರುದ್ದ ವಾಗ್ದಾಳಿ

    ಕಾಂಗ್ರೆಸ್ ನೀಡಿದ ಭರವಸೆ ಯಾವುದನ್ನು ಈಡೇರಿಸಿಲ್ಲ. ರಾಜಸ್ತಾನ, ಛತ್ತೀಸಗಡ್, ಹಿಮಾಚಲಪ್ರದೇಶಗಳಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ 420 ಕಾರ್ಡ್ ಆಗಿದೆ. ಜೆಡಿಎಸ್​ನದ್ದು ಮುಳುಗುವ ಹಡಗಿದ್ದಂತೆ. ಅದರ ಬಗ್ಗೆ ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಎ, ಬಿ ಟೀಮ್ಳಿದ್ದ ಹಾಗೆ ಎಂದರು.

    ಖರ್ಗೆ ಹೇಳಿಕೆಗೆ ಗರಂ

    ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಎನ್ನುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ ಹೇಳಿಕೆಗೆ ಗರಂ ಆದ ಅರುಣಸಿಂಗ್, ಅವರ ತಂದೆಯಿಂದ ಬಂದ ಸಂಸ್ಕಾರವದು. ರೈತರು ಮೋದಿಯನ್ನು ದೇವರಂತೆ ಕಾಣುವ ಸಮಯವಿದು. ಹಗಲು ರಾತ್ರಿ ಮೋದಿಜಿ ಬಡವರು, ರೈತರ ಬಗ್ಗೆ ಚಿಂತನೆ ಮಾಡುತ್ತಾರೆ. ಮೋದಿಯಂತಹ ನಾಯಕರು ಹುಟ್ಟುವುದು ಅಪರೂಪ. ಕಾಂಗ್ರೆಸ್ ವಿರುದ್ಧ ಮತದಾನ ಮಾಡುವ ಮೂಲಕ ಜನ ಇಂತಹವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts