ICCWC 2023, IND VS NZ: ಸೆಮಿಫೈನಲ್​ ಪಂದ್ಯದಲ್ಲಿ ಸ್ಟಾರ್​ ನಟ-ನಟಿಯರ ಮೆರುಗು; ಯಾರೆಲ್ಲಾ ಬಂದಿದ್ದಾರೆ?

Untitled design (56)
Published on

ಮುಂಬೈ: ಇಂದು (ನವೆಂಬರ್ 15) ಏಕದಿನ ವಿಶ್ವಕಪ್​ 2023ರ ಸೆಮಿಫೈನಲ್​ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್​ ಫೈನಲ್​ ಪ್ರವೇಶಿಸಲು ಭಾರೀ ಸೆಣಸಾಟಕ್ಕೆ ಮುಂದಾಗಿದೆ.

ಮೊದಲು ಟಾಸ್ ಗೆದ್ದು, ಬ್ಯಾಟಿಂಗ್ ಆರಂಭಿಸಿದ ಭಾರತ, ನಾಯಕ ರೋಹಿತ್​ ಶರ್ಮಾ ಅವರನ್ನು ಕಳೆದುಕೊಂಡಿತು. ತದನಂತರ ಸರಣಿ ಸಿಕ್ಸರ್​ಗಳ ಮುಖೇನ ವೇಗವಾಗಿ ರನ್​ ಕಲೆಹಾಕಿದ ಶುಭಮನ್​ ಗಿಲ್​ ಕಾಲು ನೋವಿನಿಂದ ರಿಟೈರ್ಡ್​​ ಹರ್ಟ್​ ಆಗಿ ಪೆವಿಲಿಯನ್​ನತ್ತ ಮುಖಮಾಡಿದರು. ಕೊಹ್ಲಿ-ಅಯ್ಯರ್​ ಜತೆಯಾಟದಲ್ಲಿ ಟೀಮ್​ ಇಂಡಿಯಾ ಬೃಹತ್​ ಮೊತ್ತದತ್ತ ಸಾಗಿದೆ.

ಈ ಹಿಂದೆ ಟೀಮ್​ ಇಂಡಿಯಾ ಸೆಮಿಫೈನಲ್​ಗೆ ತಲುಪಿರುವುದಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಭಾರೀ ಸಂತಸ ವ್ಯಕ್ತಪಡಿಸಿ, ವಿಶ್ವಕಪ್​ ಟ್ರೋಫಿ ಗೆಲ್ಲುವಂತೆ ಶೂಭಕೋರಿದ್ದರು. ಇಂದು ಮುಂಬೈನಲ್ಲಿ ನಡೆಯುತ್ತಿರುವ ಸೆಮಿಫೈನಲ್​ ಪಂದ್ಯ ವೀಕ್ಷಿಸಲು ವಾಂಖೆಡೆ ಸ್ಟೇಡಿಯಂಗೆ ಆಗಮಿಸಿರುವ ಬಾಲಿವುಡ್​, ಕಾಲಿವುಡ್​ ಹಾಗೂ ಟಾಲಿವುಡ್​ ನಟರು ಸ್ಟಾಂಡ್​ನಲ್ಲಿ ನಿಂತು ಆಟಗಾರರಿಗೆ ಭರಪೂರ ಬೆಂಬಲ ನೀಡುತ್ತಿದ್ದಾರೆ.

ಸ್ಟಾರ್​ ಕಲಾವಿದರು ಸೇರಿದಂತೆ ರಾಜಕೀಯ ಹಿನ್ನೆಲೆಯ ಬಹು ದೊಡ್ಡ ನಾಯಕರು ಕೂಡ ಪಂದ್ಯ ವೀಕ್ಷಣೆಗೆ ಆಗಮಿಸಿದ್ದಾರೆ. ಸೂಪರ್​ಸ್ಟಾರ್​ ರಜನಿಕಾಂತ್, ಅಮೀರ್ ಖಾನ್, ಬಾಲಿವುಡ್​ ದಿಗ್ಗಜ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ವೆಂಕಟೇಶ್, ರಣಬೀರ್​ ಕಪೂರ್​, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ, ಜಾನ್​ ಅಬ್ರಹಂ ಸೇರಿದಂತೆ ಮುಂತಾದವರು ಎದ್ದು ನಿಂತು ಟೀಮ್​ ಇಂಡಿಯಾಗೆ ಬೆಂಬಲಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net