More

    ಜೆಡಿಎಸ್ ಕಚೇರಿ ಗೋಡೆಗೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್

    ಬೆಂಗಳೂರು: ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಮನೆಗೆ ದೀಪಾಲಂಕಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ ಎಫ್ಐಆರ್ ದಾಖಲಿಸಿದೆ.

    ಈ ಘಟನೆ ಬೆನ್ನಲ್ಲೇ ಕಿಡಿಗೇಡಿಗಳು ಜೆ.ಪಿ.ಭವನದ ಗೋಡೆಗೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬ ಪೋಸ್ಟರ್ ಅಂಟಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪೋಸ್ಟರ್ ತೆರವುಗೊಳಿಸಿದ್ದಾರೆ.

    ಕುಮಾರಸ್ವಾಮಿ ದೀಪಾವಳಿ ಸಂದರ್ಭದಲ್ಲಿ ತಮ್ಮ ಜೆ.ಪಿ.ನಗರ ನಿವಾಸಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
    ಇದಾದ ಬಳಿಕ ಬೆಸ್ಕಾಂ ವಿಜಿಲೆನ್ಸ್ ತಂಡ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎ್ಐಆರ್ ದಾಖಲಿಸಿತ್ತು.
    ಈ ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ, ಆರೋಪ ಒಪ್ಪಿಕೊಂಡು ಮನೆಗೆ ದೀಪಾಲಂಕಾರ ಮಾಡಲು ಬಂದ ಕೆಲಸಗಾರರಿಂದ ಈ ಅಚಾತುರ್ಯವಾಗಿದೆ. ತಪ್ಪಿಗೆ ದಂಡ ಕಟ್ಟಲು ಸಿದ್ಧ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಮೇಕೆದಾಟು ಪಾದಯಾತ್ರೆಗೆ ಕರೆಂಟ್ ಎಲ್ಲಿಂದ ಬಂತು?:
    ಮೇಕೆದಾಟು ಪಾದಯಾತ್ರೆಯಲ್ಲಿ ಪ್ರತಿ ರಸ್ತೆಗೂ ಕಿಲೋಮೀಟರ್ ಗಟ್ಟಲೇ ಸೀರಿಯಲ್ ಸೆಟ್ ಹಾಕಿದ್ರಲ್ಲಪ್ಪ, ಆವಾಗ ಸಿದ್ದರಾಮಯ್ಯನ ಮನೆ ಮೀಟರ್ ಬೋರ್ಡ್‌ನಿಂದ ಕನೆಕ್ಷನ್ ಕೊಟ್ಟದ್ರ? ಅಥವಾ ಡಿಕೆಶಿ ಮನೆ ಮೀಟರ್ ಬೋರ್ಡ್‌ನಿಂದ ಕನೆಕ್ಷನ್ ಕೊಟ್ಟಿದ್ರ? ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪುಟ್ಟಸ್ವಾಮಿಗೌಡ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts