

ಬ್ರಿಜ್ಟೌನ್ (ಬಾರ್ಬಡೋಸ್): ಆಸ್ಟ್ರೆಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಅಂಪೈರ್ ತೀರ್ಪಿಗೆ ಅವಿಧೇಯತೆ ತೋರಿದ್ದಕ್ಕಾಗಿ ಐಸಿಸಿ ಛೀಮಾರಿ ಹಾಕಿದೆ. ಜತೆಗೆ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ.
ಆಸೀಸ್ ಇನಿಂಗ್ಸ್ನ 18ನೇ ಓವರ್ನಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಎಸೆತವನ್ನು ವೇಡ್ ಬೌಲರ್ನತ್ತ ಬಾರಿಸಿದರು ಮತ್ತು ಅದು ಡೆಡ್ ಬಾಲ್ ಎಂದು ಭಾವಿಸಿದರು. ಆದರೆ ಭಾರತದ ಅಂಪೈರ್ ನಿತಿನ್ ಮೆನನ್ ಹಾಗೆ ಪರಿಗಣಿಸದಿದ್ದಾಗ ವೇಡ್ ವಾಗ್ವಾದ ನಡೆಸಿದ್ದರು. ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ನಡೆಸಿದ ವಿಚಾರಣೆಯ ವೇಳೆ 36 ವರ್ಷದ ವೇಡ್ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ವೇಡ್ಗೆ ಪಂದ್ಯ ಸಂಭಾವನೆಯ ಶೇ. 50ರಷ್ಟು ದಂಡ ಶಿಕ್ಷೆ ವಿಧಿಸಲು ಅವಕಾಶವಿದ್ದರೂ, ಕೇವಲ ಛೀಮಾರಿ ಹಾಕಲಾಗಿದೆ.