ರೂಮ್ ಬಾಡಿಗೆ ಕಟ್ಟಲಾಗದೇ IAS ಆಕಾಂಕ್ಷಿ ಸಾವಿಗೆ ಶರಣು

ನವದೆಹಲಿ: ರೂಮ್​ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಭಾರತೀಯ ಆಡಳಿತ ಸೇವೆ (IAS) ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ದೆಹಲಿ ನಗರದ ರಾಜೀಂದ್ರ ನಗರದಲ್ಲಿ ನಡೆದಿದೆ.

ಅಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಹಾರಾಷ್ಟ್ರ ಅಕೋಲಾ ನಗರದ ನಿವಾಸಿ. ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಹಣವನ್ನು ಕಟ್ಟಲಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ವರ್ಷಗಳಿಂದ ಐಎಎಸ್​ ಪರೀಕ್ಷೆಗಾಗಿ ರಾಜೀಂದ್ರ ನಗರದ ಬಾಡಿಗೆ ಮನೆಯಲ್ಲಿ ಇದ್ದರು. ಖಿನ್ನತೆ ಹಾಗೂ ಜೀವನದ ಹಿಂಜರಿಕೆಯಿಂದಾಗಿ, ಜೀವನ ಸಾಗಿಸಲು ಕಷ್ಟ ಆಗಿದೆಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್​ನೋಟ್​ನಲ್ಲಿ ಅಂಜಲಿ,  ಅಪ್ಪ, ಅಮ್ಮಗೆ  ಕ್ಷಮಿಸಿ. ನನ್ನ ಚೆನ್ನಾಗಿಯೇ ನೀವು ಬೆಳೆಸಿದ್ದೀರಿ. ಆದರೆ ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಸಮಸ್ಯೆಗಳೇ ಹೆಚ್ಚಾಗಿವೆ. ನನಗೆ ಶಾಂತಿ ಬೇಕು. ನನ್ನ ಖಿನ್ನತೆ ಶಮನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನದಲ್ಲೇ ಯುಪಿಎಸ್​​ಸಿ ಪಾಸ್​ ಮಾಡಬೇಕಿತ್ತು. ಅದು ಆಗಲಿಲ್ಲ.  ಪಿಜಿ ಮತ್ತು ಹಾಸ್ಟೆಲ್​ ರೆಂಟ್​ ಕೂಡ ಜಾಸ್ತಿ ಮಾಡಿ ವಿದ್ಯಾರ್ಥಿಗಳಿಂದ ಎಲ್ಲರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ

ಮೃತ ಅಂಜಲಿ ತಿಂಗಳಿಗೆ 15,000 ರೂ.ಗಳನ್ನು ಬಾಡಿಗೆ ಕಟ್ಟುತ್ತಿದ್ದರು. ಆದರೆ ಏಕಾಏಕಿ ಮನೆಯ ಮಾಲೀಕರು 3 ಸಾವಿರ ರೂ.ಗಳನ್ನು ಏರಿಕೆ ಮಾಡಿದ್ದರಿಂದ 18,000 ರೂಗಳನ್ನು ಕಟ್ಟಿತ್ತಿದ್ದಳು ಎಂದು ಮೃತಳ ಗೆಳತಿ ಹೇಳಿದ್ದಾರೆ. ಈ ಸಂಬಂಧ ರಾಜೀಂದ್ರ ನಗರದ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ 3ನೇ ಮಗುವಿಗೆ ತಾಯಿ ಆಗುತ್ತಿರುವ ಸುದ್ದಿ ಹಂಚಿಕೊಂಡ ರಾಪರ್​​

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…