ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ 3ನೇ ಮಗುವಿಗೆ ತಾಯಿ ಆಗುತ್ತಿರುವ ಸುದ್ದಿ ಹಂಚಿಕೊಂಡ ರಾಪರ್​​

ಅಮೆರಿಕಾ:  ಅಮೆರಿಕದ ಪ್ರಸಿದ್ಧ ರಾಪರ್ ಕಾರ್ಡಿ ಬಿ ತಾಯಿ ಆಗುತ್ತಿರುವ ಖುಷಿ ಸುದ್ದಿಯೊಂದಿಗೆ ವಿಚ್ಛೇದನ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ. ಒಂದ್ಕಡೆ ವಿಚ್ಛೇದನ ಇನ್ನೊಂದು ಕಡೆ ಬೇಬಿ ಬಂಪ್ ಸುದ್ದಿಯಾಗಿದೆ.

ಕೆಂಪು ಬಣ್ಣದ ಗೌನ್ ಧರಿಸಿರುವ ಕಾರ್ಡಿ ಬಿ, ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಪ್ರತಿಯೊಂದು ಅಂತ್ಯದೊಂದಿಗೆ ಹೊಸ ಆರಂಭ ಬರುತ್ತದೆ. ಈ ಹಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವು ನನಗೆ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ. ತನ್ನ ಗರ್ಭಾವಸ್ಥೆಯನ್ನು ಪ್ರಕಟಿಸುತ್ತಾ ಎಂದು ಕಾರ್ಡಿ ಬಿ ಶೀರ್ಷಿಕೆ ಹಾಕಿದ್ದಾಳೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ನನ್ನ ಸಾಧನೆಗೆ ಸಹಾಯ ಮಾಡಿದ್ದೀರಿ. ನನಗೆ ಸ್ಫೂರ್ತಿ ನೀಡಿದ್ದೀರಿ ಎಂದು ಭಾವುಕವಾದ ಒಂದು ಪೋಸ್ಟ್ ಹಾಕಿದ್ದಾರೆ.

 ಕಾರ್ಡಿ ಬಿ ತನ್ನ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಒಂದು ದಿನ ಮೊದಲು ಆರು ವರ್ಷಗಳ ತಮ್ಮ ದಾಂಪತ್ಯ ಜೀನವದಿಂದ ವಿಚ್ಛೇದನ ಪಡೆದಿದ್ದಾರೆ. ಈ ವಿಷ್ಯವನ್ನು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರ್ಡಿ ಬಿ ತಮ್ಮ ಪತಿ ಆಫ್‌ಸೆಟ್‌ ಗೆ ವಿಚ್ಚೇದನ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಕಾರ್ಡಿ ಬಿ ಅಥವಾ ಆಫ್ ಸೆಟ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

2017 ರಲ್ಲಿ  ಕಾರ್ಡಿ ತನ್ನ ಪತಿ ಆಫ್‌ಸೆಟ್ ತನಗೆ ವಿಶ್ವಾಸದ್ರೋಹ ಮಾಡಿದ್ದಾನೆ ಎಂದು ಹೇಳಿದ್ದಳು. ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದ ಕಾರ್ಡಿ ಬಿ, ಆಫ್ ಸೆಟ್ ನನಗೆ ಮೋಸ ಮಾಡಿದ್ದಾನೆಂದು ಬಹಿರಂಗಪಡಿಸಿದ್ದು. ಅದಕ್ಕಾಗಿ ಅವರಿಂದ ಬೇರೆಯಾಗ್ತಿದ್ದೇನೆ ಎಂದಿದ್ದರು. ಆದ್ರೆ ಆ ನಂತ್ರ ಇದ್ರ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿರಲಿಲ್ಲ. ಕಾರ್ಡಿ ಬಿಗೆ ಆರು ವರ್ಷದ ಮಗಳು ಹಾಗೂ  2 ವರ್ಷದ ಮಗನಿದ್ದಾನೆ. ಇವೆರಡೂ ಆಫ್ಸೆಟ್ ಮಕ್ಕಳಾಗಿದ್ದು, ಮೂರನೇ ಮಗುವಿಗೂ ಆಫ್ಸಟ್ ಅಪ್ಪನಾಗಲಿದ್ದಾನೆ.

TAGGED:
Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…