ಅಮ್ಮನ ಅಗಲಿಕೆ ನೋವಿನ ಬೆನ್ನಲ್ಲೇ ಕನಸಿನ ಬೆನ್ನು ಹತ್ತಿದ ಐಎಎಸ್ ಅಂಕಿತಾ ಚೌಧರಿ

Ankita Choudhar

ಹರಿಯಾಣ: ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುತ್ತಿರುತ್ತವೆ. ಕಷ್ಟಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತಿರುತ್ತವೆ. ಇವುಗಳನ್ನೆಲ್ಲ ದಿಟ್ಟವಾಗಿ ಎದುರಿಸಿ ನಿಂತಾಗ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದು. ನಾವು ಬದುಕನ್ನು ಹೇಗೆ ನೋಡುತ್ತೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸಿನ ಮಟ್ಟ ನಿಂತಿರುತ್ತದೆ. ಜೀವನದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ ತನ್ನ ಕನಸಿನ ಬೆನ್ನತ್ತಿ ಅದನ್ನು ಸಾಧಿಸಿದ ವ್ಯಕ್ತಿಯೊಬ್ಬರ ಕತೆ ಇಲ್ಲಿದೆ…

ಹರಿಯಾಣದ ನಿವಾಸಿಯಾಗಿರುವ ಅಂಕಿತಾ ಚೌದರಿ ಮಧ್ಯಮ ವರ್ಗ ಕುಟುಂಬದಿಂದ ಬಂದವರು. ಅವರ ತಂದೆ ರೊಹ್ಟಕ್​ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದವರು. ಬಾಲ್ಯದಿಂದಲೇ ಓದಿನಲ್ಲಿ ಮುಂದಿದ್ದ ಅಂಕಿತಾ ಸ್ವತಂತ್ರ ಮತ್ತು ಯಶಸ್ವಿ ಬದುಕಿನ ಕನಸು ಕಂಡವರು.

ಅಂಕಿತಾ ಚೌದರಿಗೆ ಐಎಎಸ್ ಅಧಿಕಾರಿ ಆಗುವ ಕನಸು. ಐಐಟಿ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಗಲೇ ಅದಕ್ಕಾಗಿ ತಯಾರಿಯನ್ನು ಕೂಡ ನಡೆಸುತ್ತಿದ್ದರು. ವಿದ್ಯಾಭ್ಯಾಸ ಪೂರ್ಣವಾದ ನಂತರ ಸಂಪೂರ್ಣವಾಗಿ ಯುಪಿಎಸ್​ಸಿ ಪರೀಕ್ಷೆಯ ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ. 2017ರಲ್ಲಿ ಮೊದಲ ಬಾರಿಗೆ ಯುಪಿಎಸ್​ಸಿ ಬರೆದ ಅವರು ಅದರಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಆಗ ಅವರೆದುರು ಎರಡು ಆಯ್ಕೆಗಳಿತ್ತು. ತನ್ನ ಪ್ರಯತ್ನವನ್ನು ನಿಲ್ಲಿಸುವುದು ಮತ್ತು ಕನಸಿನ ಬೆನ್ನ ಹಿಂದೆ ಮತ್ತೆ ಓಡುವುದು. ಎರಡನೇಯದನ್ನೇ ಆಯ್ಕೆ ಮಾಡಿಕೊಂಡ ಅವರು ಮತ್ತೆ ಪ್ರಯತ್ನ ಮುಂದುವರೆಸುತ್ತಾರೆ.

ಈ ಸಿದ್ಧತೆಯಲ್ಲಿರುವಾಗಲೇ ಅಂಕಿತಾ ಚೌದರಿಗೆ ಬದುಕಿನ ಅತೀ ದೊಡ್ಡ ಆಘಾತ ಎದುರಾಗುತ್ತದೆ. ಕಾರು ಅಪಘಾತದಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಾಳೆ. ಆದರೆ, ತನ್ನ ಗುರಿಯನ್ನು ಬಿಡದ ಅಂಕಿತಾ ತಂದೆಯ ಪ್ರೋತ್ಸಾಹದಿಂದ ಕಠಿಣ ಪರಿಶ್ರಮ ನಡೆಸಿ 2018ರಲ್ಲಿ ಮತ್ತೆ ಪರೀಕ್ಷೆ ಬರೆದು ಅಖಿಲ ಭಾರತೀಯ ಮಟ್ಟದಲ್ಲಿ ಯುಪಿಎಸ್​ಸಿಯಲ್ಲಿ 14ನೇ ರ‍್ಯಾಂಕ್ ಪಡೆದು ಇದೀಗ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆಯ ಪ್ರೋತ್ಸಾಹವನ್ನು ನೆನಪಿಸಿಕೊಳ್ಳುವ ಅಂಕಿತಾ ಯುಪಿಎಸ್​ಸಿ ಕನಸು ಕಾಣುವ ಯುವಜನರಿಗೆ ಅಭ್ಯಾಸ ಪರೀಕ್ಷೆಗಳನ್ನು ಬರೆದು ಪ್ರಯತ್ನ ನಡೆಸಿ ಎನ್ನುವ ಕಿವಿ ಮಾತು ಹೇಳುತ್ತಾರೆ. ಬದುಕಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಆದರೆ, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎನ್ನುವುದಕ್ಕೆ ಅಂಕಿತಾ ಚೌದರಿ ಬದುಕು ಒಂದು ನಿದರ್ಶನ…

ಕೇವಲ 20 ಸೆಕೆಂಡ್ ಒಬ್ಬರಿಗೊಬ್ಬರು ತಬ್ಬಿಕೊಂಡು ಹೀಗೆ ಮಾಡಿದ್ರೆ ಸಾಕು… ಮನಸ್ಸು ರಿಲ್ಯಾಕ್ಸ್

ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ‘ಬ್ರಾ’ ; ಒಂದೇ ನಿಮಿಷದಲ್ಲಿ ನಿಮಗೆ ಬರುತ್ತದೆ​​ ಎಚ್ಚರಿಕೆ ಸಂದೇಶ…

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…