ಬಾಬರ್ ಅಜಮ್‌ಗೆ ಸಾನಿಯಾ ಮಿರ್ಜಾ ಕೊಲೆ ಬೆದರಿಕೆ!

sania-malik
Published on

ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್‌ಗೆ ಕೊಲೆ ಬೆದರಿಕೆ ಹಾಕುವ ಮೂಲಕ ಸುದ್ದಿಯಾಗಿದ್ದಾರೆ! ಇದಕ್ಕೆ ಸಾನಿಯಾ ಮಿರ್ಜಾ ಅವರ ಪತಿ ಹಾಗೂ ಪಾಕಿಸ್ತಾನದ ಆಲ್ರೌಂಡರ್ ಶೋಯಿಬ್ ಮಲಿಕ್ ಕೂಡ ಸಾಕ್ಷಿಯಾಗಿದ್ದರು! ನಿಜಕ್ಕೂ ಆಗಿದ್ದೇನೆಂದು ತಿಳಿಯಬೇಕಾದರೆ ಮುಂದೆ ಓದಿ...

ಲಾಕ್‌ಡೌನ್ ವೇಳೆ ಶೋಯಿಬ್ ಮಲಿಕ್ ಮತ್ತು ಬಾಬರ್ ಅಜಮ್ ಇನ್‌ಸ್ಟಾಗ್ರಾಂ ಲೈವ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಆಗ ಮಲಿಕ್ ನಿಮ್ಮ ನೆಚ್ಚಿನ ಅತ್ತಿಗೆ (ಬಾಬಿ) ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಬರ್ ಅಜಮ್, ಪಾಕಿಸ್ತಾನ ತಂಡದ ಮಾಜಿ ನಾಯಕ ರ್ಸ್ರಾಜ್ ಅಹ್ಮದ್ ಅವರ ಪತ್ನಿ ಖುಷ್‌ಬಕ್ತ್ ಅವರನ್ನು ಹೆಸರಿಸಿದ್ದರು. ಇದರ ಬೆನ್ನಲ್ಲೇ ಇನ್‌ಸ್ಟಾಗ್ರಾಂ ಲೈವ್ ನಡುವೆಯೇ ಸಾನಿಯಾ ಮಿರ್ಜಾ, ‘ಐ ವಿಲ್ ಕಿಲ್ ಯೂ’ ಎಂದು ಬಾಬರ್ ಅಜಮ್‌ಗೆ ತಮಾಷೆಯಾಗಿಯೇ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿನಗೆ ಇನ್ನೆಂದೂ ನಮ್ಮ ಹಾಸಿಗೆಯ ಮೇಲೆ ಮಲಗಲು ಬಿಡಲಾರೆ ಎಂದಿದ್ದಾರೆ.

ಪಾಕಿಸ್ತಾನ ತಂಡ ಈಗಾಗಲೆ ಇಂಗ್ಲೆಂಡ್ ಪ್ರವಾಸಕ್ಕೆ ಹೊರಟು ನಿಂತಿದೆ. ಆದರೆ ಶೋಯಿಬ್ ಮಲಿಕ್‌ಗೆ ತಂಡವನ್ನು ತಡವಾಗಿ ಕೂಡಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೆ ಅನುಮತಿ ನೀಡಿದೆ. ಅವರು ಇದರ ನಡುವೆ ಪತ್ನಿ ಸಾನಿಯಾ ಮತ್ತು ಪುತ್ರ ಇಜಾನ್‌ನನ್ನು ಭೇಟಿಯಾಗಲಿದ್ದಾರೆ. ಶೋಯಿಬ್ ಕಳೆದ 5 ತಿಂಗಳಿನಿಂದ ಪತ್ನಿ ಮತ್ತು ಪುತ್ರನಿಂದ ದೂರವಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net