Chief Justice BR Gavai | ಸಾಮಾಜಿಕ ಜಾಲತಾಣಗಳಲ್ಲಿನ ಅಪಪ್ರಚಾರಕ್ಕೆ ಮುಖ್ಯ ನ್ಯಾಯಮೂರ್ತಿ ಗವಾಯಿ ಅಸಮಧಾನ; ಇದು ಅನಿಯಂತ್ರಿತ ಕುದುರೆ ಎಂದ ಕಪಿಲ್​​ ಸಿಬಲ್

Untitled design - 2025-09-18T161755.520
Published on

Chief Justice BR Gavai: ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ, ಖಜುರಾಹೊ ದೇವಾಲಯಯದ ತೀರ್ಪಿನ ವಿಷಯವಾಗಿ ತಮ್ಮ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಗುರುವಾರ(ಸೆ 18) ಹೇಳಿದ್ದಾರೆ.

ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ರಾಕೇಶ್ ದಲಾಲ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿ, ವಜಾಗೊಳಿಸಿದ ನಂತರ ಈ ವಿಷಯವಾಗಿ ಚರ್ಚೆ ನಡೆದಿದೆ.

ಇದನ್ನೂ ಓದಿ:ವಿಡಿಯೋ ಕಾಲ್​, ಪೊಲೀಸ್ ಅಧಿಕಾರಿ ವೇಷ; ಆನ್​ಲೈನ್​ ವಂಚಕರ ಜಾಲಕ್ಕೆ ವಿದ್ಯಾವಂತರೇ ಬಲಿ! | Digital Arrest ಸಿಜೆಐ ಹೇಳಿದ್ದೇನು..? ಈ ಅರ್ಜಿ ಸಂಪೂರ್ಣವಾಗಿ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದ್ದು, ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿಕೊಳ್ಳಿ. ನೀವು ವಿಷ್ಣುವಿನ ದೊಡ್ಡ ಭಕ್ತರಾಗಿದ್ದರೆ ಪ್ರಾರ್ಥನೆ ಮಾಡಿ ಮತ್ತು ಧ್ಯಾನ ಮಾಡಿ ಎಂದು ಸಿಜೆಐ ಹೇಳಿದರು.

ಸಿಜೆಐಯನ್ನು ಸಮರ್ಥಿಸಿದ ತುಷಾರ್​​ ಮೆಹ್ತಾ..

ಇಂದು ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಜೆಐ ಗವಾಯಿ ಅವರ ಬಗ್ಗೆ ಕಳೆದ 10 ವರ್ಷಗಳಿಂದ ಚೆನ್ನಾಗಿ ತಿಳಿದುಕೊಡಿದ್ದೇನೆ, ಅವರು ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿನ ಈ ರೀತಿಯ ಆರೋಪಗಳು ಕಳವಳಕಾರಿ ವಿಷಯವಾಗಿದ್ದು, ನ್ಯೂಟನ್‌ನ ನಿಯಮದಂತೆ ಪ್ರತಿಯೊಂದು ಕ್ರಿಯೆಗೂ ಸಮಾನ ಪ್ರತಿಕ್ರಿಯೆ ಇರುತ್ತದೆ, ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮದಲ್ಲಿ ಅಸಮಾನ ಪ್ರತಿಕ್ರಿಯೆ ನೋಡುತಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ತುಷಾರ್​​ ಮೆಹ್ತಾ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾಜಿಕ ಜಾಲತಾಣದಲ್ಲಿನ ಈ ರೀತಿಯ ಅಪಪ್ರಚಾರದಿಂದ ಪ್ರತಿದಿನ ಬಳಲುವಂತಾಗಿದೆ, ಒಂದು ರೀತಿಯಲ್ಲಿ ಇದು ಅನಿಯಂತ್ರಿತ ಕುದುರೆಯಾಗಿದ್ದು, ಅದನ್ನು ಪಳಗಿಸಲು ಯಾವುದೇ ಮಾರ್ಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net