More

    ಈ ವಿದ್ಯಾರ್ಥಿನಿಯ ಪಾದಗಳಿಗೆ ಭರ್ಜರಿ ಬೇಡಿಕೆ…

    ಲಂಡನ್​: ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಓದಿಗೆ ಹಣವನ್ನು ತಾವೇ ದುಡಿದುಕೊಳ್ಳುತ್ತಾರೆ. ಅಂದರೆ ಪಾರ್ಟ್​ಟೈಂ ಕೆಲಸ ಮಾಡುತ್ತ ವಿದ್ಯಾಭ್ಯಾಸದಲ್ಲೂ ತೊಡಗಿರುತ್ತಾರೆ.

    ಹಾಗೇ ಈ 28ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೂ ಕೂಡ ತನ್ನ ಓದು, ಮತ್ತಿತರ ಖರ್ಚಿಗಾಗಿ ತಾನೇ ದುಡಿದು ಹಣ ಸಂಪಾದನೆ ಮಾಡುತ್ತಿದ್ದಾಳೆ. ತಿಂಗಳಿಗೆ 5,000 ಪೌಂಡ್​ಗಳಷ್ಟು (4,63,608 ರೂ.) ಗಳಿಸುತ್ತಿದ್ದಾಳೆ. ಆದರೆ ಈಕೆ ಮಾಡುತ್ತಿರುವ ಕೆಲಸ ಮಾತ್ರ ತುಂಬ ಅಸಹಜ. ಹಾಗಂತ ಅಕ್ರಮವೂ ಅಲ್ಲ, ಅನೈತಿಕವೂ ಅಲ್ಲ..!

    ಸ್ವೀಟ್​ ಆರ್ಚ್ಸ್​ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಈ ಯುವತಿ ಬೇರೇನೂ ಮಾಡುವುದಿಲ್ಲ. ತನ್ನ ಕಾಲುಪಾದದ ಫೋಟೋಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಿಯೇ ಅಷ್ಟೊಂದು ಹಣ ಸಂಪಾದಿಸುತ್ತಿದ್ದಾಳೆ. ಈಕೆಯ ಪಾದ ಅತ್ಯಂತ ಸುಂದರವಾಗಿಯೂ ಇದೆ. ಪಾದಗಳನ್ನು ಕಲಾತ್ಮಕವಾಗಿ ಕಾಣುವಂತೆ ಮಾಡಲೆಂದೇ ದಿನಕ್ಕೆ 6-10 ತಾಸುಗಳನ್ನು ವಿನಿಯೋಗಿಸುತ್ತಿದ್ದಾಳೆ. ನಂತರ ವಿವಿಧ ಆ್ಯಂಗಲ್​ಗಳಲ್ಲಿ ಫೋಟೋ ತೆಗೆದು, ಆನ್​ಲೈನ್​ನಲ್ಲಿ ಮಾರಾಟ ಮಾಡುತ್ತಾಳೆ. ಅವಳ ಅಕೌಂಟ್​ಗೆ ಹಣ ಬರುತ್ತದೆ.

    ಇದನ್ನೂ ಓದಿ: ಒಂದು ಕುಟುಂಬವನ್ನೇ ಕಾಪಾಡಿತು ಈ ಬೆಕ್ಕು…

    ಏನು? ಪಾದದ ಫೋಟೋವನ್ನೂ ಅಷ್ಟು ಪ್ರಮಾಣದಲ್ಲಿ ಕೊಳ್ಳುವವರೂ ಇದ್ದಾರಾ ಎಂದು ಹುಬ್ಬೇರಿಸಬೇಡಿ…ಈಕೆಗೆ ದಿನಕ್ಕೆ ಏನಿಲ್ಲವೆಂದರೂ 100 ಮೆಸೇಜ್​ಗಳು ಬರುತ್ತವೆ. ನಿಮ್ಮ ಕಾಲು ಪಾದದ ಫೋಟೋಗಳನ್ನು ಕಳಿಸಿ ಎಂದು ಸಂದೇಶ ಹಾಕುತ್ತಾರೆ. ಕೆಲವರಂತೂ ನಮಗೆ ಇಂಥದ್ದೇ ಆ್ಯಂಗಲ್​​ನಲ್ಲಿ, ಪೊಸಿಶನ್​, ಪೋಸ್​ಗಳಲ್ಲಿ ಫೋಟೋ ಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ.

    ಹೀಗೆ ಅವರವರ ಬೇಡಿಕೆಗೆ ಅನುಗುಣವಾಗಿ ಪಾದಗಳ ಫೋಟೋ ತೆಗೆದು ಮಾರಾಟ ಮಾಡುತ್ತಾರೆ. ಈ ಯುವತಿ ಹೇಳಿದಷ್ಟು ಹಣ ಕೊಟ್ಟು ಅವರು ಖರೀದಿ ಮಾಡುತ್ತಾರೆ.

    ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೇನೆ. ಇನ್ನೂ ಓದುವುದೂ ಇದೆ. ಹಾಗಾಗಿ ಹಣ ಬೇಕು. ನನ್ನ ಕಾಲಿನ ಪಾದಗಳೇ ಗಳಿಕೆಯ ಮೂಲವಾಗಿದೆ. ನನ್ನ ಪಾದಕ್ಕೆ ತುಂಬ ಜನ ಅಭಿಮಾನಿಗಳು ಇದ್ದಾರೆ. ಹಾಗಾಗಿ ನಾನೂ ನನ್ನ ಕಾಲುಗಳ ಬಗ್ಗೆ ವಿಶೇಷ ಗಮನ ಕೊಡುತ್ತೇನೆ. ಅವು ಯಾವಾಗಲೂ ಆಹ್ಲಾದಕರವಾಗಿ ಕಾಣುವಂತಿರಬೇಕು ಎಂದು ಆರೈಕೆ ಮಾಡುತ್ತೇನೆ ಎಂದು ಯುವತಿ ಹೇಳಿದ್ದಾರೆ.

    ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಲೇ ಇದೆ ಕರೊನಾ ಸೋಂಕು​; 24ಗಂಟೆಯಲ್ಲಿ 5000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆ

    ವಿಚಿತ್ರ ಬೇಡಿಕೆಗಳು ಬರುತ್ತವೆ. ಕೆಲವರಂತೂ ನೀವು ನಿಮ್ಮ ಕಾಲ್ಬೆರಳುಗಳನ್ನು ಚೀಪುತ್ತ, ನೆಕ್ಕುತ್ತ ಪೋಸ್​ ಕೊಡಿ ಎನ್ನುತ್ತಾರೆ. ಹಾಗೇ, ಬೂಟುಗಳನ್ನು ಧರಿಸಿರುವ ಫೋಟೋ ಕೊಡಿ ಎಂದೂ ಹೇಳುತ್ತಾರೆ. ನಾನು ಅವರ ಬೇಡಿಕೆಗಳನ್ನು ನೋಡಿ, ತೀರ ಅಸಹ್ಯಕರವಾಗಿದ್ದರೆ ಬಿಟ್ಟುಬಿಡುತ್ತೇನೆ. ಅದಿಲ್ಲದಿದ್ದರೆ ಅವರು ಹೇಳಿದ ಪೋಸ್​ನಲ್ಲಿಯೇ ಫೋಟೋ ತೆಗೆದು ಮಾರಾಟ ಮಾಡುತ್ತೇನೆ ಎಂದು ತಮ್ಮ ಗಳಿಕಾ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ.
    ನನಗೆ ಮೊದಲಿನಿಂದಲೂ ಕಾಲುಪಾದಗಳೆಂದರೆ ಇಷ್ಟ. ನನ್ನ ಪಾದಗಳು ಮೊದಲೇ ಸುಂದರವಾಗಿದ್ದವು. ಹಾಗಾಗಿ ಮೊದಮೊದಲು ಸುಮ್ಮನೆ ನನ್ನ ಕ್ರೇಜ್​ಗಾಗಿ ಅವುಗಳ ಫೋಟೋ ತೆಗೆದು ಅಪ್ಲೋಡ್​ ಮಾಡುತ್ತಿದ್ದೆ. ಆದರೆ ಈಗ ಅವುಗಳಿಂದಲೇ ನನ್ನ ಜೀವನ ನಡೆಯುತ್ತಿದೆ ಎಂದಿದ್ದಾರೆ.

    ಹಾಗೇ ಟೀಕೆಗಳೂ ಬರುತ್ತವೆ. ನೋಡಿದವರಿಗೆ ಇದೊಂದು ಸುಲಭದ ಕೆಲಸ ಅನ್ನಿಸಬಹುದು ಆದರೆ ಅಂದುಕೊಂಡಷ್ಟು ಈಸಿಯಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

    ಹಾಗೇ, ಕಾಲು ಪಾದಗಳ ಫೋಟೋಗಳಿಂದಾಗಿ ನನ್ನ ಸಾಮಾಜಿಕ ಜಾಲತಾಣಗಳ ಫಾಲೊವರ್ಸ್ ಜಾಸ್ತಿಯಾಗಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. ಅಂದ ಹಾಗೆ ಈ ಯುವತಿ ಲಂಡನ್ ಮೂಲದವರು.

    ಈ ವಿದ್ಯಾರ್ಥಿನಿಯ ಪಾದಗಳಿಗೆ ಭರ್ಜರಿ ಬೇಡಿಕೆ... ಈ ವಿದ್ಯಾರ್ಥಿನಿಯ ಪಾದಗಳಿಗೆ ಭರ್ಜರಿ ಬೇಡಿಕೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts