ದೋಹಾ: ಭಾರತದಲ್ಲಿ ಆ್ಯಪಲ್ ಫ್ಯಾಕ್ಟರಿ ತೆರೆಯಬೇಡಿ, ಭಾರತವನ್ನು ಕಟ್ಟಿ ಬೆಳೆಸುವ ಸಾಹಸ ಮಾಡಬೇಡಿ, ಅವರ ದಾರಿಯನ್ನು ಅವರು ನೋಡಿಕೊಳ್ಳುತ್ತಾರೆ ಎಂದು ಆಪಲ್ ಸಿಇಒಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಅವರ ಸಹೋದರನ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದ ರಶ್ಮಿಕಾ ಮಂದಣ್ಣ| Rashmika mandanna
ಟ್ರಂಪ್ ಹೇಳಿದ್ದೇನು?
VIDEO | Addressing a business event in Doha, US President Donald Trump (@realDonaldTrump) said:
"I had a little problem with Tim Cook yesterday. I said to him, 'Tim, you're my friend. I've treated you very well. You're coming in with $500 billion, but now I hear you're building… pic.twitter.com/YstQlDbPEQ
— Press Trust of India (@PTI_News) May 15, 2025
ದೋಹಾದಲ್ಲಿ ನಡೆದ ಉದ್ಯಮ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ನಾನು ಆಪಲ್ ಸಿಇಒ ಟಿಮ್ ಕುಕ್ಗೆ ಹೇಳುತ್ತಿದ್ದೇನೆ, ನನ್ನ ಸ್ನೇಹಿತ ನಿಮ್ಮನ್ನು ನಾನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇನೆ. ನೀವು 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದೀರಿ, ಆದರೆ ಅದನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡೆ. ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಬೇಡ, ನೀವು ಭಾರತವನ್ನು ನೋಡಿಕೊಳ್ಳಲು ಬಯಸಿದರೆ ನೀವು ಭಾರತದಲ್ಲಿ ಹೂಡಿಕೆ ಮಾಡಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಹಾಗಾಗಿ ಭಾರತದಲ್ಲಿ ಮಾರಾಟ ಮಾಡುವುದು ತುಂಬಾ ಕಷ್ಟ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಭಾರತದೊಂದಿಗೆ ವಾಷಿಂಗ್ಟನ್‌ನ ವಿಶಾಲ ವ್ಯಾಪಾರ ಸಂಬಂಧಗಳ ಕುರಿತು ಚರ್ಚಿಸುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಭಯೋತ್ಪಾದನೆ ನಿಲ್ಲುವವರೆಗೂ ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿರಲಿದೆ; ಎಸ್ ಜೈಶಂಕರ್| Indus Waters
ಕ್ಯುಪರ್ಟಿನೋ ಮೂಲದ ತಂತ್ರಜ್ಞಾನ ಕಂಪನಿಯು ಭಾರತದಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುವ ಅಸೆಂಬ್ಲಿ ಸ್ಥಾವರಗಳನ್ನು ಸ್ಥಾಪಿಸುತ್ತಿರುವಾಗ ಈ ಹೇಳಿಕೆ ನೀಡಲಾಗಿದೆ. ಈ ಸ್ಥಾವರಗಳಲ್ಲಿ ಎರಡು ತಮಿಳುನಾಡಿನಲ್ಲಿ ಮತ್ತು ಒಂದು ಕರ್ನಾಟಕದಲ್ಲಿದೆ. ಆಪಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಫಾಕ್ಸ್‌ಕಾನ್ ಮತ್ತು ಟಾಟಾ ಗ್ರೂಪ್‌ನಂತಹ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪನಿಯು ಏಪ್ರಿಲ್‌ನಿಂದ ಹೈದರಾಬಾದ್‌ನ ಫಾಕ್ಸ್‌ಕಾನ್ ಸ್ಥಾವರದಲ್ಲಿ ರಫ್ತುಗಾಗಿ ಏರ್‌ಪಾಡ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಐಫೋನ್ ತಯಾರಕ ಕಂಪನಿಯು ತನ್ನ ಮಾರಾಟಗಾರರ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿರೀಕ್ಷೆಯಿದೆ. ಪ್ರಸ್ತುತ, ಆಪಲ್‌ನ ಮಾರಾಟಗಾರರು ಮತ್ತು ಪೂರೈಕೆದಾರರು ಭಾರತದಲ್ಲಿ 1.5 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಆಪಲ್‌ಗಾಗಿ ಎರಡು ಸ್ಥಾವರಗಳನ್ನು ನಡೆಸುತ್ತಿರುವ ಟಾಟಾ ಎಲೆಕ್ಟ್ರಾನಿಕ್ಸ್ ಅತಿದೊಡ್ಡ ಉದ್ಯೋಗ ಉತ್ಪಾದಕವಾಗಿದೆ.
(ಏಜೆನ್ಸೀಸ್)