

Rashmika mandanna| 'ಬೇಬಿ' ಸಿನಿಮಾದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಹೊಸ ಪ್ರೇಮಕಥೆಗಾಗಿ ಮತ್ತೆ ಒಂದಾಗುತ್ತಿದ್ದಾರೆ. ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ 32 ಎಂದು ಹೆಸರಿಸಲಾದ ಈ ಚಿತ್ರವನ್ನು ಇಂದು (15) ನಟಿ ರಶ್ಮಿಕಾ ಮಂದಣ್ಣ ಅವರು ಕ್ಲಾಪ್ ಮಾಡುವ ಮೂಲಕ ಶುಭಹಾರೈಸಿದ್ದಾರೆ.
ಈ ಸಿನಿಮಾವನ್ನು ಆದಿತ್ಯ ಹಾಸನ್ ನಿರ್ದೇಶನ ಮಾಡಿದ್ದು, ಸಿತಾರಾ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 2023ರಲ್ಲಿ ತೆರೆಕಂಡ ‘ಬೇಬಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಮತ್ತೆ ಅದೇ ಜೋಡಿ ಜೊತೆಯಾಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಸಿತಾರ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾ ನಿರ್ಮಾಣದ ಈ ಕಥೆಯು ಜನಪ್ರಿಯ ಈಟಿವಿ ವಿನ್ ವೆಬ್ ಸರಣಿ 90 ರ ದಶಕದ ಘಟನೆಗಳಿಂದ ನಡೆಯುತ್ತದೆ. ಈ ಸರಣಿಯಲ್ಲಿ ಬಾಲನಟ ರೋಹನ್ ರಾಯ್ ನಿರ್ವಹಿಸಿದ ಆದಿತ್ಯ ಪಾತ್ರವನ್ನು ಆನಂದ್ ದೇವರಕೊಂಡ ನಿರ್ವಹಿಸುತ್ತಿದ್ದಾರೆ. ಶಿವಾಜಿ ಮತ್ತು ವಾಸುಕಿ ಆನಂದ್ ಆದಿತ್ಯನ ಪೋಷಕರ ಪಾತ್ರಗಳನ್ನು ನಿರ್ವಹಿಸುತ್ತಾರೆ. ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗಗೊಂಡಿಲ್ಲ, ಸಂಗೀತವನ್ನು ಹೇಶಮ್ ಅಬ್ದುಲ್ ವಹಾಬ್ ನೀಡಿದ್ದಾರೆ.
(ಏಜೆನ್ಸೀಸ್)