ನವದೆಹಲಿ: ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬ ನಾಯಕನು ಕೂಡ ವಿಭಿನ್ನ. ಕೆಲ ಕ್ಯಾಪ್ಟನ್‌ಗಳು ತುಂಬಾ ಗಂಭೀರವಾಗಿರುತ್ತಾರೆ. ಇನ್ನು ಕೆಲವರು ಸ್ನೇಹಮಯವಾಗಿ ಎಲ್ಲರೊಂದಿಗೆ ನಗುತ್ತಾ ಇರುತ್ತಾರೆ ಮತ್ತು ಸನ್ನಿವೇಶಗಳನ್ನು ಕೂಲ್ ಆಗಿ ನಿಭಾಯಿಸುತ್ತಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಎರಡನೇ ವರ್ಗಕ್ಕೆ ಸೇರುತ್ತಾರೆ. ರೋಹಿತ್ ಅವರು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಒಂದೇ ರೀತಿ ಇರುತ್ತಾರೆ. ಗಂಭೀರತೆ ಎನ್ನುವುದು ಅವರ ಮುಖದಲ್ಲಿ ಕಾಣುವುದೇ ಇಲ್ಲ. ತಾನು ನಗುತ್ತಾ ಎಲ್ಲರನ್ನೂ ನಗಿಸುವ ಮೂಲಕ ತನ್ನ ಸುತ್ತಲೂ ಸಕಾರಾತ್ಮಕ ವಾತಾವರಣ ಇರುವಂತೆ ರೋಹಿತ್ ನೋಡಿಕೊಳ್ಳುತ್ತಾರೆ.
ರೋಹಿತ್ ಕೆಲವೊಮ್ಮೆ ಆಟಗಾರರ ವಿರುದ್ಧ ಕೂಗಾಡಿದರೂ ಸ್ವಲ್ಪ ಸಮಯದಲ್ಲೇ ಅವರೊಂದಿಗೆ ಮತ್ತೆ ಬೆರೆಯುತ್ತಾರೆ. ಹಿರಿಯರು ಹಾಗೂ ಕಿರಿಯರು ಎಂಬ ಭೇದವಿಲ್ಲದೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಾರೆ. ಹೀಗಾಗಿ ರೋಹಿತ್ ಅಂದರೆ ಟೀಮ್ ಇಂಡಿಯಾದಲ್ಲಿ ಎಲ್ಲರಿಗೂ ತುಂಬಾ ಇಷ್ಟ. ಇತ್ತೀಚೆಗಷ್ಟೇ ರೋಹಿತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಮ್ಮ ನಡವಳಿಕೆ ಹೇಗಿರುತ್ತದೆ ಎಂಬುದರ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಮೈದಾನದಲ್ಲಿ ಇರುವಾಗ ನನಗೆ ಅನಿಸಿದ್ದನ್ನು ನಾನು ನೇರವಾಗಿ ಹೇಳುತ್ತೇನೆ. ಯಾವುದಕ್ಕೂ ನಾನು ಹಿಂಜರಿಯುವುದಿಲ್ಲ. ಯಾರು ಏನೇ ಅಂದುಕೊಂಡರೂ ನಾನು ನಾಚಿಕೆಪಡುವುದಿಲ್ಲ. ಪ್ರಾಮಾಣಿಕವಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇನೆ. ಇದು ತಂಡದ ಪ್ರತಿಯೊಬ್ಬ ಆಟಗಾರನಿಗೂ ಗೊತ್ತು. ನನ್ನನ್ನು ಚೆನ್ನಾಗಿ ಬಲ್ಲವರಿಗೆ ನನ್ನ ವ್ಯಕ್ತಿತ್ವ ಎಂಥದ್ದು ಎಂಬುದು ಅರ್ಥವಾಗುತ್ತದೆ. ಡ್ರೆಸ್ಸಿಂಗ್ ರೂಮ್‌ನಲ್ಲಿರುವವರಿಗೆ ನಾನು ತಪ್ಪು ಮಾಡುವುದಿಲ್ಲ ಎಂಬುದು ಗೊತ್ತಿದೆ ಎಂದು ಹೇಳಿದರು.
ರೋಹಿತ್ ನಿವೃತ್ತಿಯ ಬಗ್ಗೆಯೂ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ನಿವೃತ್ತಿ ಎನ್ನುವುದು ದೊಡ್ಡ ಜೋಕ್ ಆಗಿಬಿಟ್ಟಿದೆ ಎಂದರು. ಕೆಲ ಆಟಗಾರರು ಆಟಕ್ಕೆ ವಿದಾಯ ಹೇಳುತ್ತಿದ್ದು, ಕೆಲ ವರ್ಷಗಳ ನಂತರ ಮತ್ತೆ ಕ್ರೀಡೆಗೆ ಮರಳುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿಲ್ಲ. ಇತರ ದೇಶಗಳಲ್ಲಿ ಇದು ಸಾಮಾನ್ಯವಾಗಿದೆ. ಆದರೆ, ನಿವೃತ್ತಿ ಘೋಷಿಸಿದ ನಂತರ ಯೂಟರ್ನ್ ತೆಗೆದುಕೊಳ್ಳುವುದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ವೃತ್ತಿ ಜೀವನದ ಬಗ್ಗೆ ನನಗೆ ಸ್ಪಷ್ಟತೆ ಇದೆ. ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದೇನೆ. ಮತ್ತೆ ಆ ಫಾರ್ಮೆಟ್‌ಗೆ ಬರುವುದಿಲ್ಲ ಎಂದು ರೋಹಿತ್ ಸ್ಪಷ್ಟಪಡಿಸಿದರು. (ಏಜೆನ್ಸೀಸ್)
ಆ ಗಾಯಕಿಯೇ ಜಯಂ ರವಿ ಡಿವೋರ್ಸ್ಗೆ ಕಾರಣ? ಗೋವಾ ರಹಸ್ಯ ಬಯಲು, ಗಂಡನ ಮೇಲೆ ಆರತಿ ಆಕ್ರೋಶ
ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ಹೇಳುವ ಮಂತ್ರವನ್ನು ಬಹಿರಂಗಪಡಿಸಿದ ಗೌತಮ್ ಗಂಭೀರ್!