More

    ನಾನಿದ್ದಕ್ಕೆ ಅಡಿಕ್ಟ್​ ಆಗಿದ್ದೆ ಆದ್ರೆ ಅದೊಂದನ್ನು ಮಾತ್ರ ಮುಟ್ಟಿಲ್ಲ! ಶ್ರುತಿ ಹಾಸನ್​ ಓಪನ್​ ಟಾಕ್​

    ಹೈದರಾಬಾದ್​: ಕೆಜಿಎಫ್​ ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್ ನಿರ್ದೇಶನದ ಹಾಗೂ ನಟ ಪ್ರಭಾಸ್​ ಅಭಿನಯದ “ಸಲಾರ್​” ಸಿನಿಮಾ ಡಿ.22ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ ಇನ್ನೂ ಎರಡೇ ದಿನ ಬಾಕಿ ಇದೆ, ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸಿರುವುದು ಎಲ್ಲರಿಗೂ ಗೊತ್ತಿದೆ. ಸೂಪರ್​ ಸ್ಟಾರ್​ ಕಮಲ್​ ಹಾಸನ್​ ಮಗಳಾದರೂ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಶ್ರುತಿ ಇದೀಗ ತಮ್ಮ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

    ಸಲಾರ್​ ಬಿಡುಗಡೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ, ತಾನು ಮದ್ಯ ವ್ಯಸನದಿಂದ ಹೊರ ಬಂದಿರುವುದಾಗಿ ತಿಳಿಸಿದ್ದಾರೆ.

    ನನ್ನ ಜೀವನದಲ್ಲಿ ಸುಮಾರು 8 ವರ್ಷಗಳ ಕಾಲ ಮದ್ಯದ ದಾಸಳಾಗಿದ್ದೆ. ಪಾರ್ಟಿ ಸಂದರ್ಭಗಳಲ್ಲಿ ನೀವು ಪಾನಮತ್ತರಾಗಿರದಿದ್ದರೆ ಅಲ್ಲಿನ ಜನರನ್ನು ಸಹಿಸಿಕೊಳ್ಳುವುದು ತುಂಬಾನೇ ಕಷ್ಟ. ನಾನು ಯಾವಾಗಲೂ ಹ್ಯಾಂಗ್​ಓವರ್​ನಲ್ಲಿ ಇರುತ್ತಿದ್ದೆ. ನನ್ನ ಫ್ರೆಂಡ್ಸ್​ ಜತೆ ಸದಾ ಕುಡಿಯಲು ಬಯಸುತ್ತಿದ್ದೆ. ಆಲ್ಕೋಹಾಲ್​ ನನ್ನನ್ನು ತುಂಬಾ ಕಂಟ್ರೋಲ್​ ಮಾಡುತ್ತಿದೆ ಅಂತ ಅನಿಸುತ್ತಿತ್ತು. ಆದರೆ, ನಾನೆಂದಿಗೂ ಡ್ರಗ್ಸ್​ ಸಹವಾಸ ಮಾಡಿಲ್ಲ. ಆಲ್ಕೋಹಾಲ್​ಗೆ ಮಾತ್ರ ದಾಸಳಾಗಿದ್ದೆ. ಆದರೆ ನಾನೀಗ ಚೇತರಿಸಿಕೊಂಡಿದ್ದೇನೆ ಎಂದು ಶ್ರುತಿ ಹಾಸನ್​ ಹೇಳಿಕೊಂಡಿದ್ದಾರೆ.

    ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ, ಡಿ.22ರಂದು ಬಿಡಗಡೆಯಾಗಲಿರುವ ಸಲಾರ್​ ಭಾಗ 1ರಲ್ಲಿ ಶ್ರುತಿ, ಪ್ರಭಾಸ್​ಗೆ ನಾಯಕಿಯಾಗಿದ್ದಾರೆ. ನಟ ಜಗಪತಿ ಬಾಬು, ಈಶ್ವರಿ ರಾವ್​, ಶ್ರಿಯಾ ರೆಡ್ಡಿ, ಪೃಥ್ವಿರಾಜ್​ ಸುಕುಮಾರ್​ ಮತ್ತು ತಿನ್ನು ಆನಂದ್​ ಸೇರಿದಂತೆ ಬಹುತಾರಾಗಣವೇ ಈ ಚಿತ್ರದಲ್ಲಿದೆ. ದೊಡ್ಡ ಬಜೆಟಿನ ಚಿತ್ರವಾಗಿದ್ದು, ಕೆಜಿಎಫ್​ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್​ ಈ ಸಿನಿಮಾವನ್ನು ನಿರ್ಮಿಸಿದೆ. ರವಿ ಬಸ್ರೂರ್​ ಅವರೇ ಸಲಾರ್​ಗೂ ಸಂಗೀತ ನೀಡಿದ್ದಾರೆ.

    ಇದಿಷ್ಟೇ ಅಲ್ಲದೆ, ಅಡಿವಿ ಶೇಷ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾಗೆ ಶ್ರುತಿ ಸಹಿ ಮಾಡಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಆದರೆ, ಈ ಸಿನಿಮಾ ಟೈಟಲ್​ ಇನ್ನೂ ಘೋಷಣೆಯಾಗಿಲ್ಲ. ಮೇಜರ್​ ಬಳಿಕ ಅಡಿವಿ ಶೇಷ ಅವರ ಎರಡನೇ ಹಿಂದಿ ಸಿನಿಮಾ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ದಿ ಐ ಹೆಸರಿನ ಹಾಲಿವುಡ್​ ಸಿನಿಮಾದಲ್ಲೂ ಶ್ರುತಿ ನಟಿಸುತ್ತಿದ್ದಾರೆ ಎಂದು ಕೇಳಿಬಂದಿದೆ. (ಏಜೆನ್ಸೀಸ್​)

    ಮಾಸ್​ ಅಂತ ಬಂದಾಗ ಪ್ರಭಾಸ್​ ಅವರೇ… ಸಲಾರ್​ ಚಿತ್ರದ ಮೊದಲ ವಿಮರ್ಶೆ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts