

ಇಲ್ಲೊಬ್ಬಳು 25 ವರ್ಷದ ಮಹಿಳೆ ಬರೋಬ್ಬರಿ 139 ಜನರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಹೈದರಾಬಾದ್ನ ಈ ಮಹಿಳೆ ದೂರಿನಲ್ಲಿ ಪ್ರಮುಖ ವ್ಯಕ್ತಿಗಳೇ ನನ್ನ ಮೇಲೆ ಅತ್ಯಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ರೇಪ್ ಮಾಡಿದ 139 ಜನರಲ್ಲಿ ವಿದ್ಯಾರ್ಥಿ ನಾಯಕರಿದ್ದಾರೆ, ರಾಜಕಾರಣಿಗಳು ಪಿಎಗಳು, ಪತ್ರಕರ್ತರು, ವಕೀಲರು, ಉದ್ಯಮಿಗಳೇ ಹೆಚ್ಚಿನವರಿದ್ದಾರೆ ಎಂದು ಹೇಳಿದ್ದಾರೆ.
ಈಕೆಯ ದೂರಿನ ಅನ್ವಯ ಪಂಜಗುಟ್ಟ ಠಾಣೆಯಲ್ಲಿ 42 ಪುಟಗಳ ಎಫ್ಐಆರ್ ದಾಖಲಾಗಿದೆ. ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ.
ಈ ಮಹಿಳೆ 2009ರಲ್ಲಿ ಮದುವೆಯಾಗಿದ್ದಳು. ಆದರೆ ಒಂದು ವರ್ಷದಲ್ಲಿ ಗಂಡನಿಂದ ವಿಚ್ಚೇದನ ಪಡೆದಿದ್ದಳು. ಅದಕ್ಕೆ ಕಾರಣ ಪತಿಯ ಮನೆಯಲ್ಲಿ ಆಕೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ. ಪತಿಯ ಕುಟುಂಬದವರೂ ಸೇರಿ ಸುಮಾರು 20 ಜನರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದಾಗಿ ಪತಿಯಿಂದ ದೂರವಾಗಿದ್ದಳು. ಇದನ್ನೂ ಓದಿ: ಯಾವುದೇ ಟೈಂನಲ್ಲೂ ಇವರು ಮಾತ್ರ ಫುಲ್ ಅಲರ್ಟ್: ಬೆಳ್ಳಂಬೆಳಗ್ಗೆ ಗಡಿಯಲ್ಲಿ ಐವರು ಉಡೀಸ್
ಪತಿಯಿಂದ ವಿಚ್ಛೇದನ ಪಡೆದು ತಾಯಿಯ ಮನೆಗೆ ತೆರಳಿದ ಅವರು, ಓದು ಮುಂದುವರಿಸಲು ನಿರ್ಧಿರಿಸಿದರು. ಅಲ್ಲಿಂದಲೇ ಅವಳ ದುರಂತದ ಬದುಕು ಶುರುವಾಯಿತು. ಜೀವನದಲ್ಲಿ ಎದುರಾಗುವ ವ್ಯಕ್ತಿಗಳು ಅನೇಕರು ಆಕೆಯ ಮೇಲೆ ರೇಪ್ ಮಾಡಿದರು. ಕೆಲವರಂತೂ ಸಿಗರೇಟ್ನಿಂದ ಆಕೆಗೆ ಗಾಯವನ್ನೂ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು. ಇದೇ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. (ಏಜೆನ್ಸೀಸ್)