ಗರ್ಲ್​ಫ್ರೆಂಡ್​ ಜತೆ ಶಾಪಿಂಗ್​ಗೆ ಹೋಗಿ ಪತ್ನಿಯ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಹೈಡ್ರಾಮ! Husband Caught

Husband Caught
Published on

ಇಂದೋರ್: ಗರ್ಲ್​ಫ್ರೆಂಡ್​ ಜೊತೆ ತನ್ನ ಗಂಡನನ್ನು ( Husband Caught ) ನೋಡಿದ ಮಹಿಳೆಯೊಬ್ಬಳು ನಡುರಸ್ತೆಯಲ್ಲೇ ಹೈಡ್ರಾಮ ಮಾಡಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಪತಿಯ ಆರೋಗ್ಯ ಮತ್ತು ಸಮೃದ್ಧಿಗಾಗಿ ಆಚರಿಸಲಾಗುವ ಕರ್ವಾ ಚೌತ್ ಹಬ್ಬದ ಸಂದರ್ಭದಲ್ಲಿ ಮನಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಶಾಪಿಂಗ್ ( Shopping ) ​ಗೆ ಹೋದಂತಹ ಸಂದರ್ಭದಲ್ಲಿ ಪ್ರೇಯಸಿ ಜೊತೆ ತನ್ನ ಗಂಡ ಇರುವುದನ್ನು ನೋಡಿ ಮಹಿಳೆ ರಂಪಾಟ ಮಾಡಿದಳು.

ತನ್ನ ಗಂಡ ಮತ್ತು ಆತನ ಗೆಳತಿ ಶಾಪಿಂಗ್ ಮಾಡುವುದನ್ನು ನೋಡಿದ ಮಹಿಳೆ, ಸಾರ್ವಜನಿಕರು ತುಂಬಿದ್ದ ರಸ್ತೆಯ ಮಧ್ಯದಲ್ಲೇ ಅವರಿಬ್ಬರನ್ನು ತಡೆದಳು. ಶಾಂತಿಯುತವಾಗಿ ಪ್ರಾರಂಭವಾದ ಮಾತುಕತೆ ಕೆಲವೇ ನಿಮಿಷಗಳಲ್ಲಿ ಜಗಳ ಮತ್ತು ಗಲಾಟೆಗೆ ಕಾರಣವಾಯಿತು. ಸಿಕ್ಕಿಬಿದ್ದ ಮಹಿಳೆಯ ಪತಿ ನಗರಾಭಿವೃದ್ಧಿ ಇಲಾಖೆಯ ಉದ್ಯೋಗಿ ಸಂದೀಪ್ ಶಮಿ ಎಂದು ವರದಿಯಾಗಿದೆ.

ಜಗಳ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಜನರು ಜಮಾಯಿಸಿದರು. ಅನೇಕರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್​ ಮಾಡಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಹಿಳೆಯು ತನ್ನ ಪತಿ ಮತ್ತು ಆತನ ಗೆಳತಿಯನ್ನು ಹಿಡಿದುಕೊಂಡು ಕೋಪದಿಂದ ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಪತಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ, ಹೆಂಡತಿ ಮಾತ್ರ ತನ್ನ ಪಟ್ಟನ್ನು ಸಡಿಲಿಸುವುದಿಲ್ಲ. ನಾನು ನಿನ್ನ ಮಕ್ಕಳ ತಾಯಿ ಎಂದು ಗಂಡನ ಮುಂದೆ ಮಹಿಳೆ ಜೋರಾಗಿ ಕೂಗುವುದನ್ನು ವಿಡಿಯೋದಲ್ಲಿ ಕೇಳಬಹುದು.

ತುಂಬಾ ಜನರು ಸ್ಥಳಕ್ಕೆ ಸೇರುತ್ತಿದ್ದಂತೆ ಗಂಡನ ಜತೆ ಸಿಕ್ಕಿಬಿದ್ದ ಗರ್ಲ್​ಫ್ರೆಂಡ್​ ತುಂಬಾ ಆತಂಕದಲ್ಲಿರುವಂತೆ ಕಾಣುತ್ತಿದ್ದಳು. ಕೊನೆಗೆ, ಮಧ್ಯಪ್ರವೇಶಿಸಿದ ಮಧ್ಯವಯಸ್ಕ ವ್ಯಕ್ತಿಯೊಬ್ಬ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ವಿಡಿಯೋದ ಕೊನೆಯಲ್ಲಿ ಪತಿ ತನ್ನ ಹೆಂಡತಿಗೆ ತನ್ನ ಗೆಳತಿಯನ್ನು ಬಿಟ್ಟುಬಿಡುವಂತೆ ಕೇಳುತ್ತಾನೆ. ಈ ಜಗಳ ಸುಮಾರು ಅರ್ಧ ಗಂಟೆಗಳ ಕಾಲ ನಡೆಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net