Strange Behavior: ಪತ್ನಿಯ ವಿರುದ್ಧ ಸೇಡು ತಿರಿಸಿಕೊಳ್ಳಲು ಪತಿ ನಡೆದುಕೊಂಡ ನಡೆ ಎಲ್ಲರಿಗೂ ವಿಚಿತ್ರವೆನಿಸುತ್ತದೆ.
ಹೌದು, ಆಕೆಯ ಹೆಸರಿಗೆ ನೊಂದಾಯಿತಗೊಂಡ ಬೈಕ್ ಅನ್ನು, ಗಂಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿಸಿ ಸಂಚಾರ ಉಲ್ಲಂಘನೆ ಮಾಡಿದ್ದಾನೆ. ಇದರಿಂದ ಪೊಲೀಸರು ಪತ್ನಿಯಿಂದಲೇ ದಂಡ ವಸೂಲಿ ಮಾಡಿದ್ದಾರೆ. ಈ ಘಟನೆ ಬಿಹಾರ್ನಲ್ಲಿ ನಡೆದಿದೆ.
ಇದನ್ನೂ ಓದಿ:ಯುವ ನಿಧಿ ಯೋಜನೆಗೆ 6,670 ಯುವಕರ ನೋಂದಣಿ; ನಿರುದ್ಯೋಗಿ ಪದವೀಧರರಿಗೆ ನೆರವಿನ `ಗ್ಯಾರಂಟಿ’
ಮದುವೆ ಸಂದರ್ಭದಲ್ಲಿ ಆಕೆಯ ತಂದೆ ಬೈಕ್ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.(ಆಕೆಯ ಹೆಸರಿನಲ್ಲಿ ನೊಂದಯಿಸಿ) ಹೆಂಡತಿ ವಿರುದ್ಧ ಕೇಸ್ ಆಗಲಿ ಎಂದು ಅದೇ ಬೈಕ್ ಅನ್ನು ಉದ್ದೇಶಪೂರಕವಾಗಿ ಸಂಚಾರ ಉಲ್ಲಂಘನೆ ಮಾಡಿದ್ದಾನೆ. ಇದರಿಂದ ಪೊಲೀಸರು ನೊಂದಾಯಿತ ಬೈಕ್ ನಂಬರ್ಗೆ ಕಾಲ್ ಮಾಡಿ ಆಕೆಯ ಬಳಿ ದಂಡ ಕಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಪದೆಪದೇ ಸಂಚಾರ ಉಲ್ಲಂಘನೆ ಮಾಡಿದರೆ ಕೇಸ್ ಹಾಕಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಬಂಜಾರ ಕಲೆ ಸಂಸ್ಕೃತಿ ಸಂಶೋಧನೆಗೆ ಪೂರಕ, ಸಮುದಾಯದ ಸಾಹಿತ್ಯ ಪರಿಷತ್ ಉದ್ಘಾಟಿಸಿದ ಸಚಿವ ಲಾಡ್ ಅಭಿಮತ
ಹೌದು, ಮದುವೆಯಾಗಿ ಒಂದುವರೆ ತಿಂಗಳು ಕಳೆದಿದ್ದು, ದಂಪತಿ ನಡುವೆ ಜಗಳ ಹುಟ್ಟಿಕೊಂಡಿದೆ. ಅಲ್ಲಿಂದ ನಿರಂತರವಾಗಿ ಕೆಲ ದಿನಗಳಿಂದ ಮನೆಯಲ್ಲಿ ಪ್ರತಿದಿನ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದೆ. ಈ ಕಾರಣಕ್ಕೆ ಇದೀಗ ಇಬ್ಬರು ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ, ವಿಚ್ಛೇದನ ಸಿಟ್ಟಿಗೆ ಪತಿ ಈ ವಿಚಿತ್ರ ಕೆಲಸ ಮಾಡಿದ್ದಾನೆ.
ಪತಿಯ ಈ ವಿಚಿತ್ರ ನಡೆಗೆ ಎರಡ್ಮೂರು ಬಾರಿ ದಂಡ ಕಟ್ಟಿದ್ದಾಳೆ. ಆದರೆ, ಗಂಡನ ವಿಪರೀತ ವರ್ತನೆ ಕಂಡು(ಸಂಚಾರ ಉಲ್ಲಂಘನೆ) ಕಂಡು ಪೊಲೀಸ್ ಮೆಟ್ಟಿಲೇರಿದ್ದಾಳೆ. ಇತನ ಕ್ರಮಕ್ಕಾಗಿ ದೂರು ದಾಖಲಿಸಿದ್ದಾಳೆ.(ಏಜೆನ್ಸೀಸ್)