Uttar Pradesh| ಮದುವೆಯಾದ ಹೊಸ ದಂಪತಿಗಳು ಮಾಡಿಕೊಳ್ಳುವ ಅನಾಹುತ ಒಂದೊಂದಲ್ಲಾ ಬಿಡಿ. ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ತಾನು ಮದುವೆಯಾದ ಬಳಿಕ ಮೊದಲ ರಾತ್ರಿಯಲ್ಲೇ ತನ್ನ ಪತ್ನಿಗೆ ಆತನ ಗೆಳತಿಯ ಫೋಟೋ ತೋರಿಸಿ, ವಧುವಿಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯ ರಾತ್ರಿ ವರನು ವಧುವಿನ ಮೇಲೆ ತಾರತಮ್ಯ ಮಾಡಿ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ಇನ್ನೂ ಈ ಬಗ್ಗೆ ವಧು ಬೇಸರ ಹೊರಹಾಕಿದ್ದು, ವರನು ತನ್ನ ಗೆಳತಿಯ ಫೋಟೋ ತೋರಿಸಿ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ, ಆಕೆಯ ನೋಟ ನನಗೆ ಇಷ್ಟವಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಬೆಂಗಳೂರು ಕರಗ; ನಾಳೆ ಯಾವ್ಯಾವ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಇರಲಿದೆ; Festival
ಈ ಸಂಬಂಧ ಬುಲಂದ್‌ಶಾದ ಕೊಟ್ವಾಲಿ ದೇಹತ್‌ನಲ್ಲಿ ವಧು ಈಗಾಗಲೇ ವರ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾಳೆ. ಅವನ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ವರನು ತನ್ನನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ, ಸಂಬಂಧ ಮುಂದುವರಿಸಲು ನನ್ನ ಮನೆಯಿಂದ 20 ಲಕ್ಷ ರೂಪಾಯಿ ತರುವಂತೆ ಒತ್ತಾಯಿಸಿದ್ದಾನೆ ಎಂದು ವಧು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಡಿಸೆಂಬರ್ 5 ರಂದು ಗಾಜಿಯಾಬಾದ್‌ನ ಡೆನ್ನಿಸ್ ಮಲಿಕ್ ಅವರನ್ನು ಹಿನಾ ಮಲಿಕ್ ಎಂಬ ಮಹಿಳೆ ವಿವಾಹವಾಗಿದ್ದಾರೆ. ಮದುವೆಯ ನಂತರ, ಮದುವೆಯ ಮೊದಲ ರಾತ್ರಿ, ಪತಿ ಆತನ ಫೋನ್‌ನಲ್ಲಿ ಯುವತಿಯ ಫೋಟೋವನ್ನು ತೋರಿಸಿ ಇವಳು ನನ್ನ ಗೆಳತಿ ಎಂದು ಹೇಳಿದ್ದಾನೆ. ಇಬ್ಬರೂ ಐದು ವರ್ಷಗಳಿಂದ ಸಂಬಂಧದಲ್ಲಿದ್ದೇವೆ ಎಂದು ತನ್ನ ಹೆಂಡತಿಯ ಬಳಿ ಹೇಳಿಕೊಂಡಿದ್ದಾನೆ.
ಇದರ ಹೊರತಾಗಿಯೂ ನಂತರ ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯಿಂದ ಪತ್ನಿ ಚಿತ್ರಹಿಂಸೆಯನ್ನು ಸಹಿಸಿಕೊಂಡು ಬಂದಿದ್ದಾಳೆ. ಮದುವೆಗಾಗಿ ತನ್ನ ಕುಟುಂಬ ಸುಮಾರು 30 ಲಕ್ಷ ರೂಪಾಯಿ ಖರ್ಚು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ಹಣ ಕೇಳಲಿ ಎಂದು ಮಹಿಳೆ ತನ್ನ ಅಳಲು ತೋಡಿಕೊಂಡಿದ್ದು, ಪತಿ ನನಗೆ ಚಿತ್ರಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದಾನೆ. ಅಂದಿನಿಂದ ನಾನು ಹೆತ್ತವರೊಂದಿಗೆ ವಾಸಿಸುತ್ತಿದ್ದು, ಪತಿ ಡೆನ್ನಿಸ್ ನನಗೆ ಕರೆ ಮಾಡುತ್ತಾನೆ ಎಂದು ನಾನು ಭಾವಿಸಿದ್ದೆ. ಆದರೆ ಅವನು ಇನ್ನೂ ವರದಕ್ಷಿಣೆಯನ್ನೇ ಕೇಳುತ್ತಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿ ಪತಿ ಮತ್ತು ಕುಟುಂಬದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
(ಏಜೆನ್ಸೀಸ್)
ಐತಿಹಾಸಿಕ ಬೆಂಗಳೂರು ಕರಗ; ನಾಳೆ ಯಾವ್ಯಾವ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಇರಲಿದೆ; Festival