ರಕ್ತ ಪರೀಕ್ಷೆಗೆ ಒಪ್ಪದ ಪತಿ ! ಕೀಟನಾಶಕ ಸೇವಿಸಿ ಪತ್ನಿ ಸಾವು... Couple

Couple
ಸಾಂಧರ್ಬಿಕ ಚಿತ್ರ
Published on

ತೆಲಂಗಾಣ: ( Couple) ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲಯ ಒಪ್ಪಿಗೆ ನೀಡಲಿಲ್ಲ. ಈ ವಿಚಾರವಾಗಿ  ಮನನೊಂದ ಪತ್ನಿ ಕೀಟನಾಶಕ ಸೇವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಪೆದ್ದಪಲ್ಲಿ ಜಿಲ್ಲೆಯ ಜೂಲಪಲ್ಲಿ ಮಂಡಲದ ತೆಲುಕುಂಟದಲ್ಲಿ ನಡೆದಿದೆ.

ಮೇಕಲ ಪದ್ಮ (48) ಮತ್ತು ತಿರುಪತಿ ದಂಪತಿ ಜೂಲಪಲ್ಲಿ ಮಂಡಲದ ತೆಲುಕುಂಟ ಗ್ರಾಮದ ನಿವಾಸಿಗಳಾಗಿದ್ದಾರೆ. ಜೀವನೋಪಾಯಕ್ಕಾಗಿ ಅವರು 13 ವರ್ಷಗಳ ಹಿಂದೆ ಮಲೇಷ್ಯಾಕ್ಕೆ ತೆರಳಿ ಇತ್ತೀಚೆಗೆ ತಮ್ಮ ಊರಿಗೆ ಮರಳಿದರು.  ತಿರುಪತಿ ಒಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದನು. ಎಷ್ಟೇ ಆಸ್ಪತ್ರೆಗಳಿಗೆ ಹೋದರೂ ಜ್ವರ ಕಡಿಮೆಯಾಗದ ಕಾರಣ ಪದ್ಮಾ ಬೇಸರಗೊಂಡಿದ್ದರು.

ಕಳೆದ ಕೆಲವು ದಿನಗಳಿಂದ ಅವರು ಪೆದ್ದಪಲ್ಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ಷಗಳ ಚಿಕಿತ್ಸೆಯ ನಂತರವೂ ಜ್ವರ ಕಡಿಮೆಯಾಗಲಿಲ್ಲ, ಆದ್ದರಿಂದ ಅವರು ತಮ್ಮ ಪತಿಯನ್ನು ಕರೀಂನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರಿಗೆ ಕ್ಷಯರೋಗವಿದೆ ಎಂದು ದೃಢಪಡಿಸಿದರು.

ವೈದ್ಯರು ಹೆಚ್ಚಿನ ರಕ್ತ ಪರೀಕ್ಷೆಗಳನ್ನು ಮಾಡುವಂತೆ ಸೂಚಿಸಿದರು. ಆದರೆ, ತಿರುಪತಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ನಿರಾಕರಿಸಿದರು. ಎಷ್ಟೇ ಕೇಳಿದರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳದ ಕಾರಣ ಅವರ ಪತ್ನಿ ಪದ್ಮಾ ಬೇಸರಗೊಂಡಿದ್ದರು. 

ಕೀಟನಾಶಕ ಕುಡಿದು ತನ್ನ ಮನೆಯ ತೊಲೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಪತಿ ತಿರುಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net