'ಶೆಫಾಲಿ ಜರಿವಾಲಾ'ಗಾಗಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತಿ ಪರಾಗ್ ತ್ಯಾಗಿ| Shefali Jariwala

Shefali Jariwala
Published on

Shefali Jariwala: ನಟಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ಮರಣದ ಸುಮಾರು ಒಂದು ವಾರದ ನಂತರ, ಪತಿ ಪರಾಗ್ ತ್ಯಾಗಿ ಇನ್ಸ್ಟಾಗ್ರಾಮ್​ನಲ್ಲಿ ಅವರಿಗಾಗಿ ಭಾವನಾತ್ಮಕ ಪೋಸ್ಟ್​ವೊಂದನ್ನು ಬರೆದಿದ್ದಾರೆ. ಶೆಫಾಲಿ ಜರಿವಾಲಾ ಅವರು ಹೃದಯಾಘಾತದಿಂದಾಗಿ ತಮ್ಮ 42 ನೇ ವಯಸ್ಸಿನಲ್ಲಿ ನಿಧನರಾದರು. ಶೆಫಾಲಿ ಸಾವು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಆಘಾತಗೊಳಿಸಿತು.‘

ಶೆಫಾಲಿ ನಿಧನರಾದ ಕೆಲ ದಿನಗಳ ಬಳಿಕ, ಪರಾಗ್ ಪತ್ನಿಯ ಅಪರೂಪದ ಚಿತ್ರವನ್ನು ಹಂಚಿಕೊಂಡು ತಮ್ಮ ಪತ್ನಿ ಶೆಫಾಲಿಗೆ ತುಂಬಾ ಭಾವನಾತ್ಮಕ ಪೋಸ್ಟ್ ಬರೆದಿದ್ದಾರೆ.

ಜೂನ್ 27 ರಂದು ತಡರಾತ್ರಿ ಶೆಫಾಲಿ ಮುಂಬೈನ ತನ್ನ ಮನೆಯಲ್ಲಿ ನಿಧನರಾದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದರು. ಪ್ರಾಥಮಿಕ ಪೊಲೀಸ್ ಮತ್ತು ವೈದ್ಯಕೀಯ ತನಿಖೆಗಳು ಅವರು ಕಡಿಮೆ ರಕ್ತದೊತ್ತಡ, ಉಪವಾಸ ಮತ್ತು ಔಷಧಿಗಳಿಂದ ಉಂಟಾದ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಶೆಫಾಲಿ ಹೊರಗೆ ನೋಡುವುದಕ್ಕಿಂತಲೂ ಒಳಗೆ ಅದ್ಭುತವಾದ ವ್ಯಕ್ತಿತ್ವ ಹೊಂದಿದ್ದಳು. ಎಲ್ಲರನ್ನೂ ಅತಿಯಾಗಿ ಪ್ರೀತಿಸುತ್ತಿದ್ದಳು, ಮಗಳಾಗಿ, ಪತ್ನಿಯಾಗಿ, ಗೃಹಿಣಿಯಾಗಿ ಅಮ್ಮನಾಗಿ, ಸಾಮಾಜಿಕ ಜೀವನದಲ್ಲಿ ದೊಡ್ಡ ವ್ಯಕ್ತಿತ್ವವಾಗಿ ಅವಳು ನಮ್ಮೊಂದಿಗೆ ಜೀವಿಸಿದ್ದಳು. ಶೆಫಾಲಿ ಮನಸ್ಸು, ದೇಹ ಹಾಗೂ ಆತ್ಮವನ್ನು ಅತ್ಯಂತ ಶಾಂತಚಿತ್ತದಿಂದ ನಿಭಾಯಿಸಿದ್ದು ಬೆರಗು ಮೂಡಿಸಿತ್ತು. ಅವಳ ಬಗ್ಗೆ ಎದ್ದ ಊಹಾಪೋಹಗಳ ಬಗ್ಗೆ ಮಾತನಾಡುವುದು ಸುಲಭ. ಆದರೆ ನಾವು ಅವಳ ವ್ಯಕ್ತಿತ್ವವನ್ನು ನೆನೆಯಬೇಕಾಗಿದೆ. ಅವಳ ಚೈತನ್ಯವನ್ನು ನಾನು ಜೀವಂತವಾಗಿರಿಸುತ್ತೇನೆ ಎಂದು ಪತಿ ಪರಾಗ್ ತ್ಯಾಗಿ ಹೇಳಿದ್ದಾರೆ.

(ಏಜೆನ್ಸೀಸ್)

ಶೆಫಾಲಿ ಜರಿವಾಲಾ 'ಕಾಂಟಾ ಲಗಾ' ಹಾಡಿನೊಂದಿಗೆ ಮನೆಮಾತಾದರು. ಅವರಿಗೆ 'ಕಾಂಟಾ ಲಗಾ ಗರ್ಲ್' ಎಂದು ಕರೆಯಲಾಗುತ್ತಿತ್ತು. ನಂತರ ಅವರು ಸಲ್ಮಾನ್ ಖಾನ್ ಅವರ 'ಮುಜ್ಸೆ ಶಾದಿ ಕರೋಗಿ' ಚಿತ್ರದಲ್ಲೂ ಕೆಲಸ ನಿರ್ವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net